ಪಾವಗಡ: ಎಸ್ಎಸ್ಎಲ್ಸಿ ಶೇ.84.97 ಫಲಿತಾಂಶ
ಪಾವಗಡ: 2012-13ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ತಾಲೂಕಿಗೆ ಶೇ.84.97ಫಲಿತಾಂಶ ಹೊರ ಬಿದ್ದಿರುವ ಮೂಲಕ ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದಿದೆ.
ತಾಲೂಕಿನಲ್ಲಿ 1872 ವಿದ್ಯಾರ್ಥಿಗಳು ಹಾಗೂ 1661 ವಿದ್ಯಾರ್ಥಿನಿಯರೂ ಸೇರಿದಂತೆ ಒಟ್ಟು 3533 ಮಂದಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು, ಇದರಲ್ಲಿ ಅತ್ಯುನ್ನತ ಶ್ರೇಣಿ 67, ಪ್ರಥಮ ದರ್ಜೆಯಲ್ಲಿ 1051, ದ್ವಿತೀಯ ದರ್ಜೆ 730 ಹಾಗೂ ತೃತೀಯ ದರ್ಜೆ 1154 ಮಂದಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 3002ಮಂದಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಈ ಬಾರಿ ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ವಿ.ಎಸ್.ಆಂಗ್ಲ ಪ್ರೌಢಶಾಲೆಯ ಪೃಥ್ವಿರಾಜ್ 589 ಹಾಗೂ ಪಟ್ಟಣದ ಶಾರದಾ ವಿದ್ಯಾ ಪೀಠ ಪ್ರೌಢಶಾಲೆಯ ಕೆ.ವಿ.ಶ್ರೀವಲ್ಲಿ 587 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ್ದಿದ್ದಾರೆ.
ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.77.78 ಫಲಿತಾಂಶ ಬಂದಿತ್ತು. ಕಳೆದ ಸಾಲಿಗಿಂತ ಈ ಭಾರಿ ಉತ್ತಮ ಫಲಿತಾಂಶ ಬಂದಿರುವುದು ಸಮಾಧಾನಕರ ವಿಷಯವಾಗಿದೆ. ಪಾಸಾದ ಎಲ್ಲಾ ವಿದ್ಯಾರ್ಥಿಗಳನ್ನು ಬಿಇಒ ಬಿ.ಪಿ.ನಾಗರಾಜ್ ಅಭಿನಂದಿಸಿದ್ದಾರೆ.