ಪಿಯುಸಿ: ಜಿಲ್ಲೆ 14ನೇ ಸ್ಥಾನಕ್ಕೆ ಕುಸಿತ
ತುಮಕೂರು: ಈ ಬಾರಿಯ ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ತುಮಕೂರು ಜಿಲ್ಲೆ 14 ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷದ ಫಲಿತಾಂಶಕ್ಕಿಂತ ಶೇ. 7ರಷ್ಟು ಫಲಿತಾಂಶ ಹೆಚ್ಚಳವಾಗಿದ್ದರೂ, 13 ನೇ ಸ್ಥಾನದಿಂದ 14 ನೇ ಸ್ಥಾನಕ್ಕೆ ಇಳಿದಿದೆ. ಈ ಬಾರಿ ಒಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 22,906. ಇವರಲ್ಲಿ 15,434 ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ. 67.38 ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 9487 ಮಂದಿ ಪರೀಕ್ಷೆ ಬರೆದಿದ್ದು, 5919 ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 7031 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, 5493 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 78.13. ಫಲಿತಾಂಶ ಬಂದಿದೆ.
ಕೊಬ್ಬರಿ ನಗರಿಗೆ ಶೇ.74.90 ಫಲಿತಾಂಶ
ತಿಪಟೂರು: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಕೊಬ್ಬರಿ ನಗರಿಗೆ ಶೇ.74.90 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆಂದು ಬಿಇಓ ಮನಮೋಹನ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು 2888 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದು 1437 ಬಾಲಕರಲ್ಲಿ 1022, 1451 ವಿದ್ಯಾರ್ಥಿನಿಯರಲ್ಲಿ 1145 ಪಾಸಾಗಿದ್ದು ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
ಪ್ರಥಮ ಶ್ರೇಣಿ: ನಗರದ ಸ್ಟೆಲ್ಲಾ ಮೆರೀಸ್ ಖಾಸಗಿ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಸಹನಾ ಬಿ.ಪಿ., ಭೂಮಿಕಾ ಎನ್ ಅವರು ತಲಾ 603 ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೇ ಪ್ರಥಮ ಸ್ಥಾನ ಗಳಿಸಿದ್ದು, ನಳಂದ ಖಾಸಗಿ ಪ್ರೌಢಶಾಲೆಯ ನಯನಾ 601 ಅಂಕಗಳನ್ನು ಪಡೆದು 2ನೇ ಸ್ಥಾನ ಗಳಿಸಿದ್ದಾರೆ.
ವಿವಿಧ ಶಾಲೆಗಳಲ್ಲಿ ಶೇ.100 ಫಲಿತಾಂಶ
ಗುಬ್ಬಿ: ತಾಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶವನ್ನು ತಂದಿದೆ. ಕೊಡಿಯಾಲ, ಅಮ್ಮನಘಟ್ಟ ಹಸಹಟ್ಟಿ, ಹೊನ್ನಶೇಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಗಳು ಶೇ.100ರಷ್ಟು ಬಂದಿದ್ದು. ಖಾಸಗಿ ಶಾಲೆಗಳಾದ ಹೇರೂರಿನ ಭೂಮಿಶಾಲೆ, ಸ್ಟೆಲ್ಲಾಮೆರಿಸ್ ಶಾಲೆ, ನಿಟ್ಟೂರು ಸಿದ್ದಶ್ರೀಶಾಲೆ, ಜ್ಞಾನ ವಿದ್ಯಾವರ್ಥಿಕ ಶಾಲೆಗಳು 100ರಷ್ಟು ಫಲಿತಾಂಶ ಬಂದಿದೆ. ತಾಲೂಕಿನ ಅತಿ ಕಡಿಮೆಯನ್ನು ಕೃಷ್ಣ ಪ್ರೌಢಶಾಲೆ ಪಡೆದಿದೆ. ತಾಲೂಕಿಗೆ 86.02 ಫಲಿತಾಂಶ ದೊರಕಿದೆ. ತಾಲೂಕಿನ ನಿಟ್ಟೂರಿನ ಸಿದ್ದಶ್ರೀ ಶಾಲೆಯ ಡಿ.ಆರ್. ಯಶಸ್ವಿನಿ (604) ಮತ್ತು ಗುಬ್ಬಿ ಪ್ರಿಯಾ ಆಂಗ್ಲಶಾಲೆಯ ಶಶಾಂಕ್(604) ಮೊದಲ ಸ್ಥಾನ, ನಿಟ್ಟೂರಿನ ಸಿದ್ದಶ್ರೀ ಶಾಲೆಯ ಕೆ.ಕವನ (603)ಎರಡನೇ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.