ಭಾರಿ ಬಿರುಗಾಳಿ ಮಳೆ
ಗುಬ್ಬಿ: ನಗರದಲ್ಲಿ ಭಾರಿ ಗಾಳಿ ಮಳೆಯಿಂದ ವಿದ್ಯುತ್ ಕಂಬಗಳು ಹಾಗೂ ಮರಗಳು ಉರುಳಿ ಬಿದ್ದು 18 ಗಂಟೆಗಳ ಕಾಲ ವಿದ್ಯುತ್ ಸಂರ್ಪಕಡಿತ ಗೊಂಡಿತು.
ಸೋಮವಾರ ರಾತ್ರಿ ಬೀಸಿದ ಗಾಳಿ ಮತ್ತು ಮಳೆಗೆ ಗುಬ್ಬಿ ನಗರದ ಕೆಲ ಬಡವಾಣೆಯಲ್ಲಿ ಮರಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳು ಸಹ ನೆಲೆಕ್ಕುರುಳಿವೆ ಹಾಗೂ ಗುಬ್ಬಿಯ ಬಸ್ ನಿಲ್ದಾಣದ ಬಳಿ ವಿದ್ಯುತ್ ಕಂಬ ಮುರಿದು ವಾಲಿದೆ. ನಾಲ್ಕು ಕಡೆ ವಿದ್ಯುತ್ ತಂತಿಯ ಮೇಲೆ ಮರದ ಕೊಂಬೆ ಮುರಿದು ಬಿದ್ದು ಕರಣ ಗುಬ್ಬಿ ನಗರದಲ್ಲಿ 18 ಗಂಟೆಗಳ ಕಾಲ ವಿದ್ಯುತ್ ಸಂರ್ಪಕಡಿತಗೊಂಡ ಕಾರಣ ಪಟ್ಟಣದ ನಾಗರಿಕರಲ್ಲಿ ಕಿರಿಕಿರಿ ಉಂಟಾಯಿತು. ಇಡೀ ರಾತ್ರಿ ಕಗ್ಗತ್ತಲಲ್ಲಿ ಗುಬ್ಬಿ ನಗರ ಮುಳುಗಿತ್ತು. ಗುಬ್ಬಿ ತಾಲೂಕಿನ ಕಿಟ್ಟದಕುಪ್ಪೆ ಗ್ರಾಮದಲ್ಲಿ ನಾಲ್ಕು ಮನೆಗಳ ಶೀಟ್ ಮತ್ತು ಹೆಂಚುಗಳು ಗಾಳಿಗೆ ಹಾರಿ ಹೋಗಿದೆ. ಬಾಳೆಗಿಡಗಳು ನೆಲ ಕಚ್ಚಿದ್ದು ರೈತರಿಗೆ ಲಕ್ಷಾಂತರ ರು. ನಷ್ಟ ಅನುಭವಿಸಿದ್ದಾರೆ.