ಲಕ್ಷಾಂತರ ರು. ಬೆಟ್ಟಿಂಗ್
ಪಾವಗಡ: ವಿಧಾನ ಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಲಕ್ಷಾಂತರ ರು.ಗಳ ಬೆಟ್ಟಿಂಗ್ ಭರಾಟೆ ಇಲ್ಲಿ ಜೋರಾಗಿ ನಡೆದಿದೆ. ವಿಧಾನ ಸಭೆ ಚುನಾವಣೆಯ ಮತದಾನ ಮುಗಿಯುತ್ತಿದಂತೆ ಕಳೆದ 2 ದಿನಗಳಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬೆಟ್ಟಿಂಗ್ ನಡೆದಿದೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ತಿಮ್ಮರಾಯಪ್ಪ, ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ನಡುವೆ ತೀವ್ರ ಹಣಾಹಣಿ ನಡೆದಿದೆ. ಯಾರೇ ಗೆದ್ದರೂ ಫೋಟೋ ಫಿನಿಷ್ ಫಲಿತಾಂಶ ಖಚಿತ.