ಸಚಿವ ಸೊಗಡುಗೆ ಮಾತೃ ವಿಯೋಗ
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣನವರ ತಾಯಿ ತಿಮ್ಮಕ್ಕ (90) ರಂಗಾಪುರದ ಸ್ವಗೃಹದಲ್ಲಿ ಮಂಗಳವಾರ ಬೆಳಗ್ಗೆ ನಿಧನರಾದರು. ಅವರಿಗೆ ಪುತ್ರರಾದ ಸಚಿವ ಸೊಗಡು ಶಿವಣ್ಣ, ಎಸ್. ರಾಜಣ್ಣ, ಪುತ್ರಿ ಎಸ್. ನಾಗರತ್ನ ಇದ್ದಾರೆ. ಸಿದ್ಧಗಂಗೆಯ ಕಿರಿಯ ಮಠಾಧೀಶ ಸಿದ್ದಲಿಂಗಸ್ವಾಮಿಗಳು, ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಅಂತಿಮ ನಮನ ಸಲ್ಲಿಸಿದರು. ತಿಮ್ಮಕ್ಕನವರ ಅಂತ್ಯಕ್ರಿಯೆ ತುಮಕೂರು ಸಮೀಪದ ಹೊಸಳ್ಳಿಯಲ್ಲಿ ಸಂಜೆ ನೆರವೇರಿತು.