ಚಿ.ನಾ.ಹಳ್ಳಿಯಲ್ಲಿ ವಿಜಯೋತ್ಸವ
ಚಿಕ್ಕನಾಯಕನಹಳ್ಳಿ: ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆಯ ಮೂಲಕ ಬ್ಲಾಕ್ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯನವರ ಮುಖಂಡತ್ವದಲ್ಲಿ ಸರ್ಕಲ್ ಬಳಿ ಬಂದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಪಕ್ಷದ ಮುಖಂಡರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಯಕಾರ ಕೂಗಿದರು.
ನಂತರ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ರಾಜ್ಯದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದ ರಾಜ್ಯದ ಜನತೆಯನ್ನು ಅಭಿನಂದಿಸಿರು. ಇದೇ ಸಂದರ್ಭದಲ್ಲಿ ಅವರು ಹಿಂದುಳಿದ ಜನಾಂಗದ ಮುಖಂಡರಾದ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉದ್ರಿಲೋಕೇಶ್, ಅಲ್ಪಸಂಖ್ಯಾತ ಘಟದ ಕೆ.ಮಹಮದ್ ಫೀರ್ ಪಾಷ, ಸಿ.ಕೆ.ಘನಿಸಾಬ್, ಬ್ಲಾಕ್ ಉಪಾಧ್ಯಕ್ಷ ನಿಜಾನಂದಮೂರ್ತಿ, ಕೆಪಿಸಿಸಿ ಮಾಜಿ ಸದಸ್ಯ ಸಿ.ಕೆ.ಗುರುಸಿದ್ದಯ್ಯ, ಪರಿಶಿಷ್ಟ ಘಟಕದ ಬಿ.ಶಿವಕುಮಾರ್, ಕುರುಬರಹಳ್ಳಿ ಶಿವಣ್ಣ, ಸಿ.ಜಿ.ರಾಮು, ಗಂಗಾಧರಯ್ಯ, ಸಿ.ಜಿ. ಚಂದ್ರಶೇಖರ್, ಗೋವಿಂದರಾಜು, ಸತೀಶ್ ಮುಂತಾದವರಿದ್ದರು.