ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜನ ಧ್ವನಿ

Rashmi Kasaragodu
Updated On : 8 May 2013, 11:52 am

ಬಿಜೆಪಿ ಸರ್ಕಾರದ ಆಂತರಿಕ ಕಿತ್ತಾಟ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಯಿತು. ಅಲ್ಲದೇ ಮತದಾರ ಸ್ಥಿರ ಸರ್ಕಾರಕ್ಕೆ ಮತ ಹಾಕಿದ್ದು ಕಾಂಗ್ರೆಸ್ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಿ.

ಟಿ ಕವಿತಾಕೃಷ್ಣ, ಸಾಹಿತಿಗಳು...

ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಸ್ವಾಗತಾರ್ಹ. ಕರ್ನಾಟಕಕ್ಕೆ ಬದಲಾವಣೆ ಬೇಕಿದ್ದು. ಮತದಾರರು ಪ್ರಬುದ್ಧರಾಗಿ ಓಟ್ ಹಾಕಿದ್ದಾರೆ. ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು.


ಟಿ ಪಂಡಿತ್ ಜವಹರ್,ಹೋರಾಟಗಾರರು

ರಾಜಕೀಯ ನಾಟಕಗಳಿಂದ ಬೇಸತ್ತ ಕರ್ನಾಟಕದ ಜನಸಾಮಾನ್ಯರು ಬದಲಾವಣೆ ಬಯಸಿ ತೀರ್ಪು ನೀಡಿದ್ದಾರೆ. ಅದನ್ನು ಲಕ್ಷ್ಯದಲ್ಲಿರಿಸಿಕೊಂಡು, ಕನ್ನಡ ನೆಲ, ನುಡಿಯ ಹಿತವನ್ನು ಕಾಪಾಡಿಕೊಂಡು ಒಳ್ಳೆಯ ಆಡಳಿತವನ್ನು ನೀಡಬೇಕಾದ ಗುರುತರ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಹೆಗಲಿಗಿದೆ.  

ಟಿ ವಸಂತ ಭಟ್, ಲಾಂಗ್ವೇಜ್ ಕನ್ಸಲ್ಟೆಂಟ್





ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರುವುದು ಖುಷಿ. ಜತೆಗೆ ಜಿಲ್ಲೆಯಲ್ಲಿ 4 ಸ್ಥಾನ ಪಡೆದಿರುವುದು ಮತ್ತೂ ಖುಷಿ. ಇನ್ನು 2 ಬರಬೇಕಿತ್ತು. ಬಿಜೆಪಿಯ ಜನವಿರೋಧಿ ನೀತಿಯಿಂದ ಧೂಳಿಪಟವಾಯ್ತು. ಖಂಡಿತವಾಗಿ ಕಾಂಗ್ರೆಸ್ ಸುಭದ್ರ ಸರ್ಕಾರ ನೀಡುತ್ತೆ.



ಟಿ ಆರ್. ರಾಜೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ

ಬಿಜೆಪಿಯ ಭ್ರಷ್ಟಾಚಾರ, ಬಿಜೆಪಿ ಹಗರಣಗಳು, ಸ್ವಜನಪಕ್ಷಪಾತದ ವಿರುದ್ಧವಾಗಿ ರಾಜ್ಯದ ಮತದಾರರು ಕಾಂಗ್ರೆಸ್ ಪರವಾಗಿ ಮತ ನೀಡಿದ್ದಾರೆ.


ಟಿ ಕೊಟ್ಟ ಶಂಕರ್, ಉಪನ್ಯಾಸಕ


ಇದುವರೆಗೂ ಆಡಳಿತದಲ್ಲಿದ್ದ ಬಿಜೆಪಿಯವರಂತೆ ಕಾಂಗ್ರೆಸ್ಸಿಗರೂ ಪರಸ್ಪರ ಕಚ್ಚಾಡುವುದನ್ನು ಬಿಟ್ಟು ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ. ಇನ್ನಾದರೂ ರಾಜ್ಯದಲ್ಲಿ ಸುಭದ್ರ ಸರ್ಕಾರ ಮುಂದುವರೆಯಲಿ.  



ಟಿ ವೆಂಕಟೇಗೌಡ, ನಿವೃತ್ತ ಸರ್ಕಾರಿ ನೌಕರ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement