ಪಕ್ಷದ ಹೊಣೆ ಹೊತ್ತೆ, ಕ್ಷೇತ್ರ ಬಿಟ್ಟು ಸೋತೆ
ತುಮಕೂರು: ಪಕ್ಷದ ಜವಾಬ್ದಾರಿ ಹೊತ್ತೆ, ಕ್ಷೇತ್ರ ಕೈ ಬಿಟ್ಟು ಸೋತೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಮ್ಮ ಸೋಲಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷಗಿರಿ ಹೊತ್ತ ಮೇಲೆ ಜವಾಬ್ದಾರಿ ಹೆಚ್ಚಿದ್ದರಿಂದ ತಮ್ಮ ಸ್ವಕ್ಷೇತ್ರ ಕೊರಟಗೆರೆ ಕಡೆ ಗಮನ ಕೊಡಲಾಗಲಿಲ್ಲ. ಹೀಗಾಗಿ ಸೋಲಬೇಕಾಯಿತು ಎಂದು ಆತ್ಮಾವಲೋಕನದ ನುಡಿಗಳನ್ನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಸಂತಸ ತಂದಿದೆ. ರಾಜ್ಯದಲ್ಲಿ ಬದಲಾವಣೆ ಬರಬೇಕು. ಕಾಂಗ್ರೆಸ್ ಸರ್ಕಾರ ಬರಬೇಕು ಅನ್ನೋ ಜನತೆಯ ಆಶಯ ಈಡೇರಿದೆ. ಜನರಿಗೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.