ಪರಮೇಶ್ವರ ಪರಾಜಯ; ಜೆಡಿಎಸ್ ದಿಗ್ವಿಜಯ
ತುಮಕೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ 6 ಸ್ಥಾನಗಳನ್ನು ಗೆದ್ದು ಉತ್ತಮ ಸಾಧನೆ ಮೆರೆದಿದೆ. 4 ಸ್ಥಾನ ಗಳಿಸಿರುವ ಕಾಂಗ್ರೆಸ್ ತೃಪ್ತಿದಾಯಕ ಸಾಧನೆ ಮಾಡಿದ್ದರೆ ಕೇವಲ ಒಂದು ಸ್ಥಾನಕ್ಕಷ್ಟೆ ಬಿಜೆಪಿ ತೃಪ್ತಿಪಡುವಂತಾಗಿದೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಜಿ. ಪರಮೇಶ್ವರ್ಗೆ ತೀವ್ರ ಮುಖಭಂಗವಾಗಿದೆ. ಅವರು ಜೆಡಿಎಸ್ನ ಸುಧಾಕರ್ಲಾಲ್ ಅವರಿಂದ ಪರಾಜಿತಗೊಂಡಿದ್ದಾರೆ. ಸುಧಾಕರ್ಲಾಲ್ 72053 ಮತಗಳನ್ನು ಪಡೆದರೆ, ಪರಮೇಶ್ವರ್ 53775 ಮತವನ್ನಷ್ಟೇ ಗಳಿಸಿ ಸೋಲನುಭವಿಸಿದ್ದಾರೆ. ಬಿಜೆಪಿಯ ಪೆದ್ದರಾಜು ಕೇವಲ 3087 ಮತ ಪಡೆದಿದ್ದರೆ ಕೆಜೆಪಿಯ ವಾಲೆಚಂದ್ರಯ್ಯ 15712 ಮತಗಳನ್ನು ಪಡೆದಿದ್ದಾರೆ.
ಮಧುಗಿರಿಯಲ್ಲಿ ಕಾಂಗ್ರೆಸ್ನ ಕೆ.ಎನ್. ರಾಜಣ್ಣ ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ನ ವೀರಭದ್ರಯ್ಯ ವಿರುದ್ಧ 14424 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ರಾಜಣ್ಣ ಅವರು 75086 ಮತ ಪಡೆದರೆ ವೀರಭದ್ರಯ್ಯ 60660 ಮತ ಪಡೆದಿದ್ದಾರೆ. ಬಿಜೆಪಿಯ ಬಿ. ಸುಮಿತ್ರಾದೇವಿ 1741 ಮತ ಗಳಿಸಿದ್ದು, ಕೆಜೆಪಿ ಅಭ್ಯರ್ಥಿ ಇಲ್ಲಿ ಸ್ಪರ್ಧಿಸಿಲ್ಲ.
ಜೆಡಿಎಸ್ ಕುಣಿಗಲ್: ಕುಣಿಗಲ್ನಲ್ಲಿ ಜೆಡಿಎಸ್ನ ಡಿ. ನಾಗರಾಜಯ್ಯ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದ ತಮ್ಮ ಸಹೋದರ ಡಿ. ಕೃಷ್ಣಕುಮಾರ್ ವಿರುದ್ಧ ಜಯ ಸಾಧಿಸಿದ್ದಾರೆ. ಡಿ. ನಾಗರಾಜಯ್ಯ ಅವರು 44575 ಮತ ಪಡೆದಿದ್ದರೆ, ಕೃಷ್ಣಕುಮಾರ್ 34943 ಮತ ಪಡೆದಿದ್ದಾರೆ. ಕಾಂಗ್ರೆಸ್ನ ಬಿ.ಬಿ. ರಾಮಸ್ವಾಮಿಗೌಡ 33918 ಮತ ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿ ಸಿ.ಎನ್. ರವಿಕಿರಣ 24604 ಮತ ಪಡೆದಿದ್ದಾರೆ.
ಸೋತ ಸೊಗಡು: ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಫೀಕ್ ಅಹಮದ್ ಅವರು ತಮ್ಮ ಪ್ರತಿಸ್ಪರ್ಧಿ ಕೆಜೆಪಿಯ ಜ್ಯೋತಿ ಗಣೇಶ್ ವಿರುದ್ಧ ಜಯಸಾಧಿಸಿದ್ದಾರೆ. ಡಾ. ರಫೀಕ್ ಅಹಮದ್ ಅವರು 43681 ಮತ ಪಡೆದರೆ, ಜ್ಯೋತಿ ಗಣೇಶ್ 40073 ಮತ ಪಡೆದಿದ್ದಾರೆ. ಜೆಡಿಎಸ್ನ ಗೋವಿಂದರಾಜು 38322 ಮತ ಪಡೆದರೆ ಬಿಜೆಪಿಯ ಸೊಗಡು ಶಿವಣ್ಣ 13159 ಮತ ಪಡೆದಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ. ಸುರೇಶ್ಗೌಡ ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ನ ಗೌರಿಶಂಕರ್ ವಿರುದ್ಧ ಜಯಗಳಿಸಿದ್ದಾರೆ. ಸುರೇಶ್ಗೌಡ ಅವರು 55029 ಮತ ಪಡೆದಿದ್ದಾರೆ. ಜೆಡಿಎಸ್ನ ಗೌರಿಶಂಕರ್ 53457 ಮತ ಪಡೆದಿದ್ದಾರೆ. ಕೆಜೆಪಿಯ ನಿಂಗಪ್ಪ 22709 ಮತ ಪಡೆದಿದ್ದರೆ ಕಾಂಗ್ರೆಸ್ನ ಯಲಚವಾಡಿ ನಾಗರಾಜ್ 8599 ಮತ ಪಡೆದಿದ್ದಾರೆ.
“d¾Úß’^ÚM¥ÚÃ: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಟಿ.ಬಿ. ಜಯಚಂದ್ರ ಅವರು 74089 ಮತ ಪಡೆದು ಜೆಡಿಎಸ್ನ ಬಿ. ಸತ್ಯನಾರಾಯಣ ವಿರುದ್ಧ ಜಯಸಾಧಿಸಿದ್ದಾರೆ. ಬಿ. ಸತ್ಯನಾರಾಯಣ 59408 ಮತ ಪಡೆದಿದ್ದಾರೆ. ಬಿಜೆಪಿಯ ಬಿ.ಕೆ. ಮಂಜುನಾಥ್ 18884 ಮತಗಳನ್ನು ಪಡೆದಿದ್ದಾರೆ. ಕೆಜೆಪಿಯ ಇಂತಿಯಾಜ್ ಅಹಮದ್ 1415 ಮತ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಕೆ.ಎಂ. ತಿಮ್ಮರಾಯಪ್ಪ ಅವರು ಕಾಂಗ್ರೆಸ್ನ ವೆಂಕಟೇಶ್ ವಿರುದ್ಧ ಜಯಗಳಿಸಿದ್ದಾರೆ. ತಿಮ್ಮರಾಯಪ್ಪ ಅವರು 68686 ಮತ ಪಡೆದಿದ್ದರೆ, ಹೆಚ್.ವಿ. ವೆಂಕಟೇಶ್ 63532 ಮತ ಪಡೆದಿದ್ದಾರೆ. ಬಿಜೆಪಿಯ ಜಿ.ವಿ. ವಿಜಯರಾಜು 5327 ಮತ ಪಡೆದರೆ ಕೆಜೆಪಿಯ ಪಾವಗಡ ಶ್ರೀರಾಮ್ ಕೇವಲ 1229 ಮತ ಪಡೆದಿದ್ದಾರೆ. ಹಾಗೆಯೇ ಜೆಡಿಯುನ ಕೆ. ಗೋಪಾಲ್ ಕೂಡ 272 ಮತ ಮಾತ್ರ ಪಡೆದಿದ್ದಾರೆ.
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಎಸ್.ಆರ್. ಶ್ರೀನಿವಾಸ್ 58783 ಮತ ಪಡೆದು ಕೆಜೆಪಿಯ ಬೆಟ್ಟಸ್ವಾಮಿ ವಿರುದ್ಧ ಜಯಸಾಧಿಸಿದ್ದಾರೆ. ಬೆಟ್ಟಸ್ವಾಮಿ ಅವರು 51539 ಮತ ಪಡೆದಿದ್ದಾರೆ. ಕಾಂಗ್ರೆಸ್ನ ಹೊನ್ನಗಿರಿಗೌಡ ಅವರು 18548 ಮತ ಗಳಿಸಿದ್ದಾರೆ. ಬಿಜೆಪಿಯ ನಟರಾಜ್ ಸಾಗರನಹಳ್ಳಿ 2396 ಮತ ಪಡೆದಿದ್ದಾರೆ. ಜೆಡಿಯುನ ಎಚ್.ಎಂ. ಉಮೇಶ್ 767 ಮತ ಪಡೆದಿದ್ದಾರೆ.
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಎಂ.ಟಿ. ಕೃಷ್ಣಪ್ಪ ಅವರು 66089 ಮತ ಪಡೆದು ಜಯಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕೆಜೆಪಿಯ ಮಸಾಲೆ ಜಯರಾಂ ವಿರುದ್ಧ ಜಯಸಾಧಿಸಿದ್ದಾರೆ. ಮಸಾಲೆ ಜಯರಾಂ ಅವರು 57164 ಮತ ಪಡೆದಿದ್ದರೆ ಬಿಜೆಪಿಯ ಬಿ.ಕೆ. ಸೋಮಶೇಖರ್ 3542 ಮತ ಪಡೆದಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಸುರೇಶ್ಬಾಬು 60759 ಮತ ಪಡೆದು ಜಯಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕೆಜೆಪಿಯ ಮಾಧುಸ್ವಾಮಿಯನ್ನು ಸೋಲಿಸಿದ್ದಾರೆ. ಮಾಧುಸ್ವಾಮಿ ಅವರು 49620 ಮತ ಪಡೆದಿದ್ದಾರೆ. ಬಿಜೆಪಿಯ ಕಿರಣಕುಮಾರ್ 29150 ಮತ ಪಡೆದರೆ, ಕಾಂಗ್ರೆಸ್ನ ಸತೀಶ್ ಸಾಸಲು ಕೇವಲ 10344 ಮತ ಪಡೆದಿದ್ದಾರೆ.
ಕಾಂಗ್ರೆಸ್ಗೆ ಕೊಬ್ಬರಿ: ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಕೆ. ಷಡಕ್ಷರಿ ಅವರು 56817 ಮತ ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಬಿ.ಸಿ. ನಾಗೇಶ್ 45215 ಮತ ಪಡೆದರೆ ಕೆಜೆಪಿಯ ಲೋಕೇಶ್ವರ್ 28667 ಮತ ಪಡೆದಿದ್ದಾರೆ. ಜೆಡಿಎಸ್ನ ಎಂ. ಲಿಂಗರಾಜು ಕೇವಲ 6104 ಮತ ಪಡೆದಿದ್ದಾರೆ.