ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಾವಗಡ: ತಿಮ್ಮರಾಯಪ್ಪಗೆ ಭರ್ಜರಿ ಜಯ

Rashmi Kasaragodu
Updated On : 8 May 2013, 11:52 am

ಕ.ಪ್ರ.ವಾರ್ತೆ  ಪಾವಗಡ  ಮೇ 8
ತೀವ್ರ ಕುತೂಹಲ ಕೆರಳಿಸಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಹಣಾಹಣಿಗೆ ಬುಧವಾರ ತೆರೆಬಿದಿದ್ದು, ಜೆಡಿಎಸ್ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಅವರು 8,090 ಮತಗಳ ಅಂತರದಿಂದ ಜಯಭೇರಿ ಸಾಧಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಅವರ ಜಯಭೇರಿ ಸುದ್ಧಿ ಹರಡುತ್ತಿದ್ದಂತೆ ಜೆಡಿಎಸ್ ಸಾವಿರಾರು ಕಾರ್ಯಕರ್ತರು ಸೇರಿ ಪಟ್ಟಣದ ಶ್ರೀಶನೇಶ್ವರ ವೃತ್ತ ಹಾಗೂ ಮಾರುತಿ ಟಾಕೀಸ್ ಬಳಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಿ ಜೆಡಿಎಸ್ ಹಾಗೂ ಶಾಸಕ ಕೆ.ಎಂ.ತಿಮ್ಮರಾಯಪ್ಪ ಪರ ಜೈಕಾರಗಳನ್ನು ಹಾಕಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಶ್ರೀರಾಮ್ ಮೆಡಿಕಲ್ಸ್ನ ನಾಗಭೂಷಣ್ ತಮ್ಮ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ತೆರಳಿ ದೇವಸ್ಥಾನ ವೃತ್ತದಿಂದ ಟೋಲ್ಗೇಟ್ ವರೆಗೆ ಪಟಾಕಿಗಳನ್ನು ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಹಿರಿಯ ಮುಖಂಡ ಡಾ.ಜಿ.ವೆಂಕಟರಾಮಯ್ಯ ತಮ್ಮ ಅಪಾರ ಬೆಂಬಲಿಗರೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಿ ಎಚ್.ಡಿ.ಕುಮಾರಸ್ವಾಮಿ ಹಾಗೂ ತಿಮ್ಮರಾಯಪ್ಪ ಅವರಿಗೆ ಜೈಕಾರಗಳನ್ನು ಹಾಕಿ  ಪಟಾಕಿಗನ್ನು ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಅಂಜಯ್ಯ ನಾಗೇಂದ್ರಪ್ಪ ಪ್ರಭಾಕರ್ ಮುಂತಾದವರಿದ್ದರು.
ತಾಲೂಕಿನ ವೈ.ಎನ್ ಹೊಸಕೋಟೆ, ಪಾವಗಡ ಆದರ್ಶನಗರ, ಭೊಮ್ಮತನಹಳ್ಳಿ, ನೇರಳೇಕುಂಟೆ, ರಂಗಸಮುದ್ರ, ಓಬಳಾಪುರ, ಗುಜ್ಜನಡು ಮಂಗಳವಾಡ, ಲಿಂಗದಹಳ್ಳಿ, ತಿರುಮಣಿ, ವಳ್ಳೂರು, ವೆಂಕಟಾಪುರ,ನಾಗಲಮಡಿಕೆ, ಶೈಲಾಪುರ, ದೊಡ್ಡೇನಹಳ್ಳಿ, ಸಾಸಲಕುಂಟೆ ಸೇರಿದಂತೆ ತಾಲೂಕಿನ ಎಲ್ಲಾ ದಲಿತ ಕಾಲೋನಿಗಳಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ತಿಮ್ಮರಾಯಪ್ಪ ಅವರಿಗೆ ಜೈಕಾರಗಳನ್ನು ಹಾಕುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement