ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಧುಗಿರಿ ವಿಧಾನಸಭಾ ಕ್ಷೇತ್ರ ಕೈ ವಶ

Rashmi Kasaragodu
Updated On : 8 May 2013, 11:54 am

ಕ.ಪ್ರ.ವಾರ್ತೆ  ಮಧುಗಿರಿ  ಮೇ 8
ತೀವ್ರ ಕುತೂಹಲ ಕೆರಳಿಸಿದ್ದ ಮಧುಗಿರಿ ವಿಧಾನಸಭಾ ಕ್ಷೇತ್ರ ಕೈ ವಶವಾಗಿದೆ. ಕಾಂಗ್ರೆಸ್ ಅಭ್ಯರ್ಥಿ  ಕೆ.ಎನ್.ರಾಜಣ್ಣ, ಜೆಡಿಎಸ್ನ   ಎಂ.ವಿ.ವೀರಭದ್ರಯ್ಯ  ವಿರುದ್ಧ  14,427  ಮತಗಳ  ಭಾರಿ ಅಂತರದಿಂದ  ಗೆಲವು ಸಾಧಿಸಿದರು.
 ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ರಾಜಣ್ಣ ಕ್ಷೇತ್ರದಲ್ಲಿ ಎರಡು ಸಲ ಪರಾಭವಗೊಂಡರು ಕೂಡ ದೃತಿಗೆಡದೆ ಸದಾ ಕ್ಷೇತ್ರದ ಜನರ ದುಃಖ-ದುಮ್ಮಾನಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದರ ಪರಿಣಾಮ ವಿಜಯದ ಮಾಲೆ ಸುಲಭವಾಯಿತು. ಇನ್ನು ಬಿಜೆಪಿ ಬಿ.ಸುಮಿತ್ರಾದೇವಿ 1741 ಮತ ಪಡೆದರೆ, ಬಿಎಸ್ಪಿ  ಕೋರಮಂಗಲ ಮುನಿಯಪ್ಪ 1992 ಮತ ಪಡೆಯುವ ಮೂಲಕ ಕಳಪೆ ಪ್ರದರ್ಶನ ನೀಡಿದ್ದಾರೆ.
ಕಾಂಗ್ರೆಸ್ನ ಕೆ.ಎನ್.ರಾಜಣ್ಣ 75,086 ಮತ ಪಡೆದರೆ   ಸಮೀಪದ ಪ್ರತಿಸ್ಪರ್ಧಿ  ಜೆಡಿಎಸ್ನ ವೀರಭದ್ರಯ್ಯ  60,659 ಮತ ಪಡೆದು  ಪರಾಭವಗೊಂಡಿದ್ದಾರೆ. ಕಾಂಗ್ರೆಸ್ನ ಕೆ.ಎನ್.ರಾಜಣ್ಣ ಅವರ ಗೆಲವಿನಿಂದ ಮತ್ತೆ ಮಧುಗಿರಿ ಕ್ಷೇತ್ರ ಕೈ ಭದ್ರ ಕೋಟೆ ಎಂಬುದನ್ನು ನಿರೂಪಿಸಿದಂತಾಗಿದೆ.
 ಕೆ.ಎನ್. ರಾಜಣ್ಣ ಗೆಲವಿನಿಂದ ಪುಳಕಿತರಾದ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು  ಕೈ ಬಾವುಟ ಹಿಡಿದು ವಿಜಯದ ಘೋಷಣೆ ಕೂಗುತ್ತಾ ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡರು. ಜಯ ದೊರೆತ ನಂತರ ಕೆ.ಎನ್.ರಾಜಣ್ಣ ಮಧುಗಿರಿ ಕ್ಷೇತ್ರಕ್ಕೆ  ಆಗಮಿಸಿ ಇತಿಹಾಸ ಪ್ರಸಿದ್ಧ ಶ್ರೀದಂಡನಿಮಾರಮ್ಮ ದೇವಿ ದೇವಸ್ಥಾನದಿಂದ ಅಭಿಮಾನಿಗಳು ಸಿದ್ಧಪಡಿಸಿದ್ದ ತೆರೆದ ವಾಹನದಲ್ಲಿ  ಮಧುಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಕೈ ಮುಗಿಯುತ್ತಾ ಸಾಗಿದರು. ಅದ್ಧೂರಿ ವಿಜಯೋತ್ಸವ ಆಚರಿಸಿದರು.ದಾರಿಯೂದ್ದಕ್ಕೂ ಅಭಿಮಾನಿಗಳು ಪಟಾಕಿ ಸಿಡಿಸಿ ಕಾಂಗ್ರೆಸ್ನ ದಿಗ್ಗಜರಿಗೆ ಮತ್ತು ರಾಜಣ್ಣನವರ ಪರವಾಗಿ ವಿಜಯದ ಘೋಷಣೆಗಳೂ ಮುಗಿಲು ಮುಟ್ಟಿದವು. ಈ ವಿಜಯೋತ್ಸವಕ್ಕೆ ತಾಲೂಕಿನಿಂದ ಜನ ಸಾಗರವೇ ಹರಿದು ಬಂದು ರಾಜಣ್ಣ ಅವರಿಗೆ ಅಭಿನಂದನೆ ಸಲ್ಲಿಸುವ ದೃಶ್ಯ ಕಂಡು ಬಂತು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಬಾಲೇನಹಳ್ಳಿ ಶಿವಣ್ಣ, ಡಿಸಿಸಿ ಬ್ಯಾಂಕು ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಸೇರಿದಂತೆ ಅಪಾರ ಅಭಿಮಾನಿಗಳು ಕಾರ್ಯರ್ಕತರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement