ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಹುಲ್ಗಾಂಧಿಎಫೆಕ್ಟ್ ಇಲ್ಲ

Rashmi Kasaragodu
Updated On : 8 May 2013, 11:55 am

ತುಮಕೂರು: ರಾಹುಲ್ಗಾಂಧಿ ಪ್ರಚಾರಕ್ಕೆಂದು ಬಂದಿದ್ದ ತುಮಕೂರು ಜಿಲ್ಲೆಯಲ್ಲೇ ಕಾಂಗ್ರೆಸ್ ಗಣನೀಯ ಸಾಧನೆ ಮಾಡಿಲ್ಲ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರೇ ಪರಾಭವಗೊಂಡಿದ್ದಾರೆ. ಈ ಮೊದಲು ತುಮಕೂರು ಜಿಲ್ಲೆಯಲ್ಲಿ 6 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಇಲ್ಲಿ ಗೆದ್ದಿರುವುದು ಕೇವಲ 4 ಕ್ಷೇತ್ರಗಳು ಮಾತ್ರ. ಶಿರಾದಿಂದ ಜಯಚಂದ್ರ, ತಿಪಟೂರಿನಿಂದ ಷಡಕ್ಷರಿ, ತುಮಕೂರು ನಗರದಿಂದ ರಫೀಕ್ ಅಹಮದ್, ಮಧುಗಿರಿಯಿಂದ ಕೆ.ಎನ್. ರಾಜಣ್ಣ ಮಾತ್ರ ಗೆದಿದ್ದಾರೆ. ಕಳೆದ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಸೋನಿಯಾಗಾಂಧಿ ಬಂದಿದ್ದಾಗ ಕಾಂಗ್ರೆಸ್ 4 ಸೀಟುಗಳನ್ನು ಪಡೆದಿತ್ತು.
ತಿಪಟೂರು ಅಭ್ಯರ್ಥಿಗಳ ಮತಗಳಿಕೆ ವಿವರ
ತಿಪಟೂರು, ಮೇ 8: ತಿಪಟೂರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಕೆ.ಷಡಕ್ಷರಿಯವರು 56817ಮತಗಳನ್ನು ಪಡೆದು 11602 ಬಹುಮತಗಳಿಂದ ಗೆದ್ದಿದ್ದಾರೆ. ಬಿಜೆಪಿ ಶಾಸಕ ಬಿ.ಸಿ. ನಾಗೇಶ್ 45215 ಮತಗಳನ್ನು ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಕೆಜೆಪಿ ಅಭ್ಯರ್ಥಿ ಲೋಕೇಶ್ವರ 28667 ಮತಗಳನ್ನು ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement