ಅಂಧ ಬಾಲಕನ ಸಾಧನೆ
ಹಾಸನ: ಅಂಧ ಬಾಲಕನೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.91.52 ಅಂಕ ಪಡೆಯುವ ಮೂಲಕ ಪೋಷಕರಿಗೆ ಹೆಸರು ತಂದಿದ್ದಾನೆ. ತಾಲೂಕಿನ ಕಟ್ಟಾಯ ಹೋಬಳಿಯ ಎಚ್.ಕೆ.ಜಯರಾಂ - ಎಸ್.ಆರ್.ನಾಗರತ್ನ ಎಂಬುವರ ಪುತ್ರ ಎಚ್.ಜೆ.ಭಾರ್ಗವ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 572 ಅಂಕ ಪಡೆದಿದ್ದಾನೆ. ಕನ್ನಡದಲ್ಲಿ 113, ಇಂಗ್ಲಿಷ್ನಲ್ಲಿ 90, ಹಿಂದಿಯಲ್ಲಿ 96, ಅರ್ಥಶಾಸ್ತ್ರ 86, ಸಮಾಜಶಾಸ್ತ್ರ 92 ಮತ್ತು ಸಮಾಜ ವಿಜ್ಞಾನದಲ್ಲಿ 95 ಅಂಕಗಳನ್ನು ಪಡೆಯುವ ಮೂಲಕ ತಂದೆ ತಾಯಿಗೆ ಕೀರ್ತಿ ತಂದಿದ್ದಾನೆ.