ಔಷಧಿ ವ್ಯಾಪಾರಿ ಕ್ಷೇಮಾಭಿವೃದ್ಧಿ ಸಂಘಪ್ರತಿಭಟನೆ
ತಿಪಟೂರು: ಔಷಧಿ ವಹಿವಾಟನ್ನು ವಿದೇಶಿ ಬಂಡವಾಳ ಹೂಡಿಕೆಯಿಂದ ಮುಕ್ತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಮುಂಬೈ ಕರೆಯ ಮೇರೆಗೆ ತುಮಕೂರು ಜಿಲ್ಲಾ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲೂಕು ಸಂಘಟನೆಗಳು ಮೇ 10ರ ಶುಕ್ರವಾರ ಒಂದು ದಿನದ ಪ್ರತಿಭಟನಾ ಬಂದ್ ಆಚರಣೆ ನಡೆಸಲಾಗುತ್ತಿದೆ. ಅಂದು ಸಾರ್ವಜನಿಕರಿಗೆ ಆಗುವ ಅನಾನುಕೂಲಕ್ಕೆ ಸಂಘವು ಕ್ಷಮೆಯಾಚುಸುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎನ್.ಎಸ್. ರವೀಂದ್ರ ತಿಳಿಸಿದ್ದಾರೆ.