ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜನತೆ ನೀಡಿದ ತೀರ್ಪಿಗೆ ಬದ್ಧ: ವೆಂಕಟರಮಣಪ್ಪ

Rashmi Kasaragodu
Updated On : 9 May 2013, 11:56 am

ಕ.ಪ್ರ.ವಾರ್ತ್ಣೆ ಪಾವಗಡ್ಣ ಮೇ 9
ಚುನಾವಣೆಯಲ್ಲಿ ಜನತೆ ನೀಡಿದ ತೀರ್ಪಿಗೆ ಬದ್ಧನಾಗಿದ್ದು ದೃತಿಗೆಡದೆ ಕುಡಿಯುವ ನೀರಿನ ಅನುಷ್ಠಾನ ಸೇರಿದಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅವಿರತ ಹೋರಾಟ ಮಾಡುವುದಾಗಿ ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಜನತೆ ನೀಡಿದ ತೀರ್ಪಿಗೆ ಬದ್ಧರಾಗಿದ್ದು ತಮ್ಮ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ. ವೆಂಕಟೇಶ್ ಅವರ ಪರ ಮತ ನೀಡಿದ ಕ್ಷೇತ್ರದ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಶಾಸಕರ ಅವಧಿಯಲ್ಲಿ ತಾವು ಕೈಗೊಂಡಿದ್ದ ಅಭಿವೃದ್ಧಿ ಕೆಲಸಗಳ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆ ನಮ್ಮನ್ನು ಕೈಬಿಡಲ್ಲ ಎಂಬ ದೃಢ ವಿಶ್ವಾಸ ಹೊಂದಿದೆ. ಪಕ್ಷ ಹಾಗೂ ತಮ್ಮ ಪರವಿದ್ದ ಅಲೆಯನ್ನು ಸಹಿಸದ ವಿರೋಧ ಪಕ್ಷದ ಕೆಲವರು ವಿನಾಕಾರಣ ತಮ್ಮ ವಿರುದ್ಧ ಅಪಪ್ರಚಾರ ಮಾಡಿದ್ದರೂ ಅವುಗಳಿಗೆ ಕಿವಿಗೊಡದ ಜನತೆ ತಮ್ಮ ಪುತ್ರ ವೆಂಕಟೇಶ್ ಅವರಿಗೆ 63,823ಮತಗಳನ್ನು ನೀಡಿದ್ದಾರೆ. ಕೇವಲ 4ಸಾವಿರ ಮತಗಳ ಅಂತರದಲ್ಲಿ ಹಿನ್ನೆಡೆಯಾಗಿದೆ. ಆದರೂ ಚುನಾವಣೆಯಲ್ಲಿ ತಮ್ಮ ಪರ ಜನತೆ ನೀಡಿದ ತೀರ್ಪಿಗೆ ಬದ್ಧರಾಗಿ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಹೋರಾಟ ಮಾಡುವುದಾಗಿ ಅವರು ತಿಳಿಸಿದರು.
 ಫ್ಲೋರೈಡ್ ಯುಕ್ತ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲು ತಾವು ಶಾಸಕರಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರದಲ್ಲಿ ಅವಿರತ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಮಂಜೂರಾತಿ ಪಡೆದು ಹೇಮಾವತಿ ನದಿ ನೀರು ಅನುಷ್ಠಾನ ಮಾಡಲಾಗಿತ್ತು. ಸಂಬಂಧಪಟ್ಟ ಎಂಜಿನಿಯರ್‌ಗಳಿಂದ ಸರ್ವೆ ಕಾರ್ಯ ವಿಳಂಬವಾದ ಕಾರಣ ಕಾಮಗಾರಿ ಕೈಗೊಳ್ಳುವುದು ತಡವಾಯಿತು. ಈ ಮಧ್ಯೆ  ಚುನಾವಣೆ ಎದುರಾಯಿತು.
ತಮ್ಮ ಅವಧಿಯಲ್ಲಿ  ಸಾವಿರಾರು ಕೋಟಿ ಪ್ರಗತಿ ಪರ ಕೆಲಸಗಳ ಬಗ್ಗೆ ನನಗೆ ತೃಪ್ತಿ ತಂದಿದ್ದು ಎಚ್.ವಿ.ವೆಂಕಟೇಶ್ ಹಾಗೂ ಪಕ್ಷದ ಮುಖಂಡರ ನೇತೃತ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ಮಾಡುವುದಾಗಿ ಅವರು ತಿಳಿಸಿ ಫಲಿತಾಂಶದ ಬಗ್ಗೆ ಪಕ್ಷದ ಕಾರ್ಯಕರ್ತರು ದೃತಿಗೆಡದೆ ಧೈರ್ಯದಿಂದಿರುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement