ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸವಲತ್ತಿಗಾಗಿ ಸಿಐಟಿಯು ಪ್ರತಿಭಟನೆ

Rashmi Kasaragodu
Updated On : 9 May 2013, 11:48 am

ಕ.ಪ್ರ.ವಾರ್ತೆ   ತುಮಕೂರು   ಮೇ 9
ಹತ್ತು ಹಲವಾರು ಸವಲತ್ತಿಗೆ ಆಗ್ರಹಿಸಿ ನಗರದಲ್ಲಿ ಸಿಐಟಿಯುವ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ತುಮಕೂರು ಜಿಲ್ಲಾಸಮಿತಿ ವತಿಯಿಂದ ನಗರದ ಟೌನ್‌ಹಾಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಟ್ಟಡ ಕಾರ್ಮಿಕರ ಹಕ್ಕೋತ್ತಾಯಗಳ ಮನವಿ ನೀಡಲಾಯಿತು.
ಈ ಪ್ರತಿಭಟನಾ ಮೇರವಣಿಗೆಯನ್ನು ಉದ್ದೇಶಿಸಿ ಕಟ್ಟಡ ಕಾರ್ಮಿಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್ ಮಾತನಾಡಿ ಕೇಂದ್ರ ರಾಜ್ಯ ಸರ್ಕಾರಗಳು ದುಡಿಯುವ ಜನರ ಹಿತಾಸಕ್ತಿಗಳನ್ನು ಮರೆತು ಜನವಿರೋಧಿ ಆಡಳಿತವನ್ನು ನೀಡುತ್ತಿವೆ ಎಂದರು.
ಸಮರ್ಪಕವಾದ ನೀರನ್ನು ಒದಗಿಸದೆ ನಗರಸಭೆ ಕಂದಾಯ ಹೆಚ್ಚಿಸುತ್ತಿದೆ. ಸರಿಯಾಗಿ ವಿದ್ಯುತ್ ನೀಡದೆ ವಿದ್ಯುತ್ ದರವನ್ನು ಹೆಚ್ಚಿಸುತ್ತಿರುವುದು ಇವರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ರಾಜ್ಯ ಸರ್ಕಾರ ಕಟ್ಟಡ ಮತ್ತು ಇತರೇ ನಿರ್ಮಾಣ ಕಲ್ಯಾಣ ಮಂಡಳಿಯ ವತಿಯಿಂದ ನೀಡುವ ಸೌಲಭ್ಯಗಳನ್ನು ತ್ವರಿತವಾಗಿ ನೀಡದೆ ಇರುವುದರಿಂದ ಕಾರ್ಮಿಕರು ಇದರ ಸೌಲಭ್ಯ ವಂಚಿತರಾಗುತ್ತಿದ್ದಾರೆ. ಅದನ್ನು ತಪ್ಪಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆರೋಗ್ಯದ ಕಡೆ ಗಮನ ನೀಡಿ: ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಪ್ರತಿಭಟನಾ ಸಭೆಯನ್ನು ಬೆಂಬಲಿಸಿ ಮಾತನಾಡಿ ಕಟ್ಟಡ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕು ಮಾತ್ರವಲ್ಲದೆ ಕಾನೂನುಗಳ ಅರಿವು ಪಡೆದು ಅದರ ಸೌಲತ್ತುಗಳನ್ನು ಪಡೆಯಲು ಸಿಐಟಿಯು ಸಂಘಟನೆಯ ಅಡಿಯಲ್ಲಿ ಸಂಘಟಿತರಾಗಬೇಕೆಂದು ಕರೆ ನೀಡಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿ ಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾಯಿದೆ ಜಾರಿಗೆ ತರುವಂತೆ ತೀವ್ರತರವಾದ ಚಳವಳಿ ನಡೆಯಬೇಕೆಂದು ಕರೆ ನೀಡಿದರು.
ಈ ಪ್ರತಿಭಟನೆ ನೇತೃತ್ವವನ್ನು ಖಜಾಂಚಿ ಗೋವಿಂದರಾಜು, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್, ನಗರ ಕಾರ್ಯದರ್ಶಿಗಳಾದ ರಾಮಚಂದ್ರ, ರಾಮಣ್ಣ, ಶಂಕರಪ್ಪ, ಲಕ್ಷ್ಮಣ್, ಸತ್ಯನಾರಾಯಣರಾಜ್, ಗಂಗಾಧರ್, ಚಿಕ್ಕಣ್ಣ, ತಿಪಟೂರು ತಿಮ್ಮೇಗೌಡ, ಶಿರಾ ತಾಲೂಕಿನ ರಂಗನಾಥಪ್ಪ, ತಿಪ್ಪೇಸ್ವಾಮಿ ತುರುವೇಕೆರೆ ತಾಲೂಕಿನ ರವಿ, ಗುಬ್ಬಿ ತಾಲೂಕಿನ ಬಸವಣ್ಣ, ಶಿವಣ್ಣ, ಮಧುಗಿರಿ ತಾಲೂಕು ಬೆಟ್ಟಪ್ಪ, ವೀರಣ್ಣ, ಲಕ್ಷ್ಮೀನಾರಾಯಣಪ್ಪ, ವೆಂಕಟಾಚಲ, ಕುಣಿಗಲ್ ತಾಲೂಕಿನ ಮಂಜಣ್ಣ, ಮಹಿಳಾ ಮುಖಂಡರಾದ ಗಂಗಮ್ಮ, ರತ್ನಮ್ಮ ಮುಂತಾದವರು ನೇತೃತ್ವ ವಹಿಸಿದರು.
ಪಿಂಚಣಿ ಅಗತ್ಯ: ಪ್ರತಿಭಟನಾ ಮೆರವಣಿಗೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಸಾವಿರ ರು. ಪಿಂಚಣಿ ನೀಡಿ ಪ್ರತಿವರ್ಷ ಬೆಲೆ ಏರಿಕೆಗನುಗುಣವಾಗಿ ಶೇ. 10 ರಷ್ಟು ಹಣವನ್ನು ಹೆಚ್ಚಿಸಬೇಕು. ಕಟ್ಟಡ ಕಾರ್ಮಿಕರಿಗೆ ನೀಡುವ ವಿದ್ಯಾಭ್ಯಾಸ, ಅಪಘಾತ, ವಿವಾಹ, ಮುಂತಾದ ಸೌಲಭ್ಯಗಳ ಹಣವನ್ನು ಜರೂರಾಗಿ ಕಾರ್ಮಿಕರಿಗೆ ಸಿಗುವಂತೆ ಕ್ರಮವಹಿಸಬೇಕು. ಎಲ್ಲಾ ರಾಜ್ಯಗಳಲ್ಲೂ ಕಟ್ಟಡ ಕಾರ್ಮಿಕ ಕೇಂದ್ರ ಶಾಸನವನ್ನು ಜಾರಿಗೊಳಿಸಬೇಕು. ಅಗತ್ಯ ವಸ್ತುಗಳ ಹಾಗೂ ಕಟ್ಟಡ ಸಾಮಗ್ರಿಗಳ ಬೆಲೆಯನ್ನು ತಕ್ಷಣ ಇಳಿಸಿ ಬೆಲೆ ಏರಿಕೆ ಆಗದಂತೆ ಕೇಂದ್ರ ರಾಜ್ಯ ಸರ್ಕಾರಗಳು ಕ್ರಮವಹಿಸಬೇಕು. ಕಟ್ಟಡ ಕಾರ್ಮಿಕರಿಗೆ ವಾಸದ ಮನೆಯ ಹಕ್ಕನ್ನು ಮೂಲಭೂತ ಹಕ್ಕಾಗಿಸಬೇಕು. ಎಲ್ಲಾ ಕಾರ್ಮಿಕರನ್ನು ಬಿ.ಪಿ.ಎಲ್. ಪಟ್ಟಿಗೆ ಸೇರಿಸಿ ಪಡಿತರ ಚೀಟಿ ನೀಡಬೇಕೆಂದು. ಘೋಷಣೆಗಳ ಮೂಲಕ ಅಖಿಲ ಭಾರತ ಬೇಡಿಕೆ ದಿನದ ಅಂಗವಾಗಿ ಕೇಂದ್ರ-ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement