129 ವಿದ್ಯಾರ್ಥಿಗಳ ಪೈಕಿ 133 ವಿದ್ಯಾರ್ಥಿಗಳು ಪಾಸು
ಕ.ಪ್ರ. ವಾರ್ತೆ ಪಾವಗಡ ಮೇ 10
ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದಿದ್ದು ವಿಜ್ಞಾನ ವಿಭಾಗದಲ್ಲಿ ಒಟ್ಟು 129 ವಿದ್ಯಾರ್ಥಿಗಳ ಪೈಕಿ 133 ಮಂದಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಅತ್ಯುನ್ನತ ಶ್ರೇಣಿ 9, ಪ್ರಥಮ ಶ್ರೇಣಿಯಲ್ಲಿ 56, ದ್ವಿತೀಯ ಶ್ರೇಣಿಯಲ್ಲಿ 33 ಹಾಗೂ ತೃತೀಯ ದರ್ಜೆಯಲ್ಲಿ 15 ವಿದ್ಯಾರ್ಥಿಗಳು ತೇರ್ಗಡೆಯಾಗಿ ಒಟ್ಟು ಶೇ.92ರಷ್ಟು ಫಲಿತಾಂಶ ಬಂದಿದೆ.
ಇದೇ ಕಾಲೇಜಿನ ಪಿಯುಸಿ ಕಾರ್ಮಸ್ ವಿಭಾಗದಲ್ಲಿ ಶೇ.84, ಹಾಗೂ ಕಲಾ ವಿಭಾಗದಲ್ಲಿ ಶೇ.84ರಷ್ಟು ಫಲಿತಾಂಶ ಹೊರಬಿದಿದ್ದು ಕಾರ್ಮಸ್ನಲ್ಲಿ 167 ವಿದ್ಯಾರ್ಥಿಗಳ ಪೈಕಿ 130 ವಿದ್ಯಾರ್ಥಿಗಳು ತೇರ್ಗಡೆಯಾಗಿ ಅತ್ಯುನ್ನತ ಶೇಣಿ 5, ಪ್ರಥಮ ಶ್ರೇಣಿಯಲ್ಲಿ 77 ಹಾಗೂ ತೃತೀಯ ಶ್ರೇಣಿಯಲ್ಲಿ 18 ಮಂದಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ 83 ವಿದ್ಯಾರ್ಥಿಗಳ ಪೈಕಿ 68 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಅತ್ಯುನ್ನತ ಶ್ರೇಣಿಯಲ್ಲಿ 1, ಪ್ರಥಮ ಶ್ರೇಣಿಯಲ್ಲಿ 25, ದ್ವಿತೀಯ ಶ್ರೇಣಿಯಲ್ಲಿ 20 ಹಾಗೂ ತೃತೀಯ ಶ್ರೇಣಿಯಲ್ಲಿ 22ಮಂದಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಯನ್ನು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀವೆಂಕಟರಾಮಯ್ಯ, ಕಾರ್ಯದರ್ಶಿ ಡಾ.ಜಿ.ವೆಂಕಟರಾಮಯ್ಯ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.