ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೈಗಾರಿಕೆ ಘಟಕದಲ್ಲಿ ಅಗ್ನಿ ದುರಂತ

Rashmi Kasaragodu
Updated On : 11 May 2013, 12:40 pm

ಕ.ಪ್ರ.ವಾರ್ತ್ಣೆಕುಣಿಗಲ್  ಮೇ 10
ಪಟ್ಟಣದ ಆರ್ಎಂಸಿ ಯಾರ್ಡ್ ಮುಂಭಾಗದಲ್ಲಿನ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಇಂಡಸ್ಟ್ರೀಯಲ್ ಎಸ್ಟೇಟ್ನಲ್ಲಿನಲ್ಲಿ ಕೈಗಾರಿಕೆ ಘಟಕವೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಕೆಲಕಾಲ ನೆರೆಹೊರೆಯ ಜನತೆ ಸೇರಿದಂತೆ ಪಟ್ಟಣದ ಜನತೆಯನ್ನು ಆತಂಕಕ್ಕೆ ದೂಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
 ಇಂಡಸ್ಟ್ರೀಯಲ್ ಎಸ್ಟೇಟ್ನಲ್ಲಿನ ಭೂಮಿಕಾ ಹರ್ಬಲ್ ಎಕ್ಸ್ಟ್ರಾಕ್ಟ್ಸ್ ಗಿಡಮೂಲಿಕೆಗಳಿಗೆ ರಸಾಯನಿಕ ಬಳಸಿ ಉತ್ಪನ್ನಗಳನ್ನು ತಯಾರು ಮಾಡುವ ಘಟಕವಿದೆ. ಘಟಕದ ಒಂದು ಮೂಲೆಯಲ್ಲಿ ದಿಢೀರ್ ಬೆಂಕಿ ಅವಘಡ ಸಂಭವಿಸಿತು. ಕ್ಷಣಮಾತ್ರದಲ್ಲ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿತು.  ಸಂಗ್ರಹಿಸಲಾಗಿದ್ದ ರಸಾಯನಿಕ ಬ್ಯಾರಲ್ಗಳಿಗೆ ಬೆಂಕಿ ಸೋಂಕಿದ ಪರಿಣಾಮ ಕಟ್ಟಡದ ಮೇಲ್ಚಾವಣಿ ಸಿಡಿದು, ಬೆಂಕಿ, ಹೊಗೆ ಆಗಸದೆತ್ತರಕ್ಕೆ ಪಸರಿಸಿತು.
ಅಗ್ನಿಶಾಮಕದಳದ ಕಾರ್ಯಾಚರಣೆ: ಸದರಿ ಕೈಗಾರಿಕಾ ಎಸ್ಟೇಟ್ಗೆ ಹೊಂದುಕೊಂಡಂತೆ ನೂರಾರು ಮನೆಗಳಿದ್ದು, ಆಗ್ನಿಶಾಮಕ ಠಾಣೆಯ ಸಮೀಪವೇ ಘಟನೆ ನಡೆದಿದ್ದರಿಂದ ಕೂಡಲೆ ಅಗ್ನಿಶಾಮಕ ಠಾಣಾಧಿಕಾರಿ ಕಿರಣ್ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದರು. ಸಿಪಿಐ ಧಮೇಂದ್ರ, ಪಿಎಸೈ ಗುರುಪ್ರಸಾದ್ ಸಿಬ್ಬಂದಿಯೊಂದಿಗೆ ಮುನ್ನಚ್ಚರಿಕೆ ಕ್ರಮವಾಗಿ, ಬೆಂಕಿಗೆ ಆಹುತಿಯಾದ ಘಟಕದ ಸುತ್ತಮುತ್ತಲ ಸುಮಾರು ಮುವತ್ತಕ್ಕೂ ಹೆಚ್ಚು ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ಕಳಿಸಿದರು.  ಬೆಂಕಿ ಹಾಗೂ ಕಪ್ಪು ಹೊಗೆ ಆಗಸದೆತ್ತರಕ್ಕೆ ಹರಡಿದ್ದು ಇಡೀ ಪಟ್ಟಣದ ಜನತೆ ಘಟನಾ ಸ್ಥಳಕ್ಕೆ ಕುತೂಹಲ ಭರಿತರಾಗಿ ಆಗಮಿಸಿದರು. ಜನತೆ ನಿಯಂತ್ರಿಸುವುದು ಪೊಲೀಸರಿಗೆ ತಲೆನೋವಿನ ಕೆಲಸವಾಯಿಕು. ಈ ಮಧ್ಯೆ ರಸಾಯನಿಕ ಬ್ಯಾರೆಲ್ಗಳು ಸಿಡಿಯಲು ಪ್ರಾರಂಭಿಸಿ ಪರಿಸ್ಥಿತಿ ಮತ್ತಷ್ಟು ಗೊಂದಲಮಯವಾಯಿತು. ಅಗ್ನಿ ಆಕಸ್ಮಿಕಕ್ಕೆ ಸಿಲುಕಿದ ಕಟ್ಟಡದ ಪಕ್ಕದಲ್ಲಿ ಮರದ ಉತ್ಪನ್ನಗಳನ್ನು ಸಂಗ್ರಹಿಸಿದ್ದು, ಮತ್ತೊಂದು ಕಟ್ಟಡದಲ್ಲಿ ಹಳೇ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೆ ತಗುಲದಂತೆ ನಿಯಂತ್ರಿಸುವ ಒತ್ತಡಕ್ಕೆ ಅಗ್ನಿಶಾಮಕ ಸಿಬ್ಬಂದಿ ಸಿಲುಕಿದರು.
 ಸತತ ಮೂರು ತಾಸಿನ ಅಗ್ನಿಶಾಮಕ ಸಿಬ್ಬಂದಿಯ ಪರಿಶ್ರಮದಿಂದ, ಎರಡು ಅಗ್ನಿಶಾಮಕ ವಾಹನಗಳು ನೊರೆ ಬಳಸಿ ಅಗ್ನಿ ನಿಯಂತ್ರಿಸುಸುವಲ್ಲಿ ಯಶಸ್ವಿಯಾದರು. ನಂತರ ಎಸ್ಟೇಟ್ ಸುತ್ತಮುತ್ತಲಿನ ಹಾಗೂ ಪಟ್ಟಣದ ಜನತೆ ನಿಟ್ಟುಸಿರು ಬಿಟ್ಟರು.
 ನೂತನ ಶಾಸಕ ಡಿ.ನಾಗರಾಜಯ್ಯ ಸ್ಥಳಕ್ಕಾಗಮಿಸಿ ಪರಿಸ್ಥಿತಿಯ ಬಗ್ಗೆ ಅವಲೋಕಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಘಟಕದ ಮಾಲೀಕ ಸುದರ್ಶನ್, ನಾಗರಾಜ ಅವರಿಗೆ ಸಾಂತ್ವನ ಹೇಳಿದರು. ಡಿವೈಎಸ್ಪಿ ಉಮಾರಾಣಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement