ಗೆಳತಿ ಮನೆಗೆ ಹೋಗಿದ್ದ ಯುವತಿ ನಾಪತ್ತೆ
ಹೊಳೆನರಸೀಪುರ: ತಾಲೂಕಿನ ಮಾಲನಾಯಕನಹಳ್ಳಿ ವಾಸಿ ಶಿವಣ್ಣ ಎಂಬುವರ ಪುತ್ರಿ ಅನಿತ(22) ಸ್ನೇಹಿತೆಯ ಮದುವೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆದ್ದಾಳೆ. ಚಹರೆ 5.2 ಅಡಿ ಕೋಲುಮುಖ, ಸಾಧಾರಣಾ ಮೈಕಟ್ಟು, ಎಣ್ಣೆಗೆಂಪುಬಣ್ಣ, ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಹಳದಿ ಮಿಶ್ರಿತ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ತಂದೆ ಶಿವಣ್ಣ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಲಾರಿ ಕಳವು
ಸಕಲೇಶಪುರ: ತಿಪಟೂರು ತಾ. ಗೌಡನಕಟ್ಟೆ ವಾಸಿ ಜಿ.ಎಂ.ಷಣ್ಮುಖ ತಮ್ಮ ಟಿಪ್ಪರ್ ಲಾರಿಗೆ ಚಾಲಕ ರಮೇಶನನ್ನು ನೇಮಕ ಮಾಡಿ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಯುಪೇಟೆ ಬೆಳಗೋಡು ರಸ್ತೆಯ ಟಾರು ಕೆಲಸಕ್ಕೆ ಬಿಟ್ಟಿದ್ದರು. ಬುಧವಾರ ರಾತ್ರಿ ಬಾಳ್ಳುಪೇಟೆಯ ಕರ್ನಾಟಕ ಹೊಟೇಲ್ ಮುಂದೆ ನಿಲ್ಲಿಸಿ ಊಟ ಮುಗಿಸಿ ಪಕ್ಕದ ರೂಂನಲ್ಲಿ ಮಲಗಿದ್ದು, ಮಾರನೇ ದಿನ ಬೆಳಗ್ಗೆ ಎದ್ದು ನೋಡಿದಾಗ 3 ಲಕ್ಷ ರು. ಬೆಲೆಯ ಲಾರಿ ಕಳುವಾಗಿದೆ. ಜಿ.ಎಂ.ಷಣ್ಮುಖ ಸಕಲೇಶಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ