ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಡಾ.ಜಿ.ಪರಮೇಶ್ವರ್ಗೆ ಸಿಎಂ ಪದವಿ ನೀಡಿ: ಮನವಿ

Rashmi Kasaragodu
Updated On : 11 May 2013, 12:39 pm

ಶಿರಾ: ರಾಜ್ಯದ ಮುಖ್ಯಮಂತ್ರಿ ಪದವಿಯನ್ನು ಡಾ.ಜಿ.ಪರಮೇಶ್ವರ್ ಅವರಿಗೆ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಹಾಗೂ ಎಚ್ಚರಿಕೆಯನ್ನು ಛಲವಾದಿ ಮಹಾ ಸಭಾ ತಿಳಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಛಲವಾದಿ ಮಹಾಸಭಾದ ಅಧ್ಯಕ್ಷ  ಕೆ.ಸಿ.ರಂಗನಾಥ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಪಕ್ಷ ಸುಮಾರು 8-9 ವರ್ಷಗಳಿಂದ ಸರ್ಕಾರ ಅಧಿಕಾರಕ್ಕೆ ತರಲು ಸಾಧ್ಯವಾಗದೆ ಇದ್ದ ಸಮಯದಲ್ಲಿ ಇದಕ್ಕೆ ಸೂಕ್ಷ್ಮ ಕಾರಣ ಮತ್ತು ಸೂಕ್ತ ಪ್ರಭಾವಿ ನಾಯಕರನ್ನು ಹುಡುಕಿಕೊಂಡ ಕಾಂಗ್ರೆಸ್ ಹೈಕಮಾಂಡ್ ಡಾ.ಜಿ.ಪರಮೇಶ್ವರ್ ಅವರನ್ನು ಕೆ.ಪಿ.ಸಿ.ಸಿ. ಅಧ್ಯಕ್ಷರನ್ನಾಗಿ ನೇಮಿಸಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಜವಾಬ್ದಾರಿ ನೀಡಿತು.
ಅದರಂತೆ ಡಾ.ಜಿ.ಪರಮೇಶ್ವರ್ ಅವರು ತನಗೆ ನೀಡಿದ ರಾಜ್ಯದ ಜವಾಬ್ದಾರಿಯನ್ನು ಹಗಲು ರಾತ್ರಿ ಎನ್ನದೆ ಶ್ರಮಿಸಿ ಕಾಂಗ್ರೆಸ್ಗೆ ಬನ್ನಿ ಬದಲಾವಣೆ ತನ್ನಿ, ಪಾದಯಾತ್ರೆ ಇನ್ನಿತರ ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಪಕ್ಷವನ್ನು ಸಂಘಟಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಬೇಕಿದ್ದ ಬೆಂಬಲಕ್ಕಿಂತಲೂ ಹೆಚ್ಚು ಬೆಂಬಲವನ್ನು ಪಡೆಯುವಲ್ಲಿ ಮೂಲ ಕಾರಣರಾಗಿರುತ್ತಾರೆ.
ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳಿಂದಲೂ ಡಾ.ಜಿ.ಪರಮೇಶ್ವರ್ ಅರ್ಹರಾಗಿದ್ದು ಇವರನ್ನು ಕಾಂಗ್ರೆಸ್ ಹಿರಿಯ ನಾಯಕರು 2013ರ ವಿಧಾನಸಭಾ ಚುನಾವಣೆಯಲ್ಲಿ ಉದ್ದೇಶ ಪೂರಕವಾಗಿ ಸೋಲಿಸಲು ಕಾರಣರಾಗಿದ್ದಾರೆ. ಇದನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಮುಖ್ಯಮಂತ್ರಿ ಪದವಿಯನ್ನು ಡಾ.ಜಿ.ಪರಮೇಶ್ವರ್ ಅವರಿಗೆ ನೀಡಬೇಕೆಂದು ಆಗ್ರಹಿಸಿದರು. ಒಂದು ವೇಳೆ ಯಾವುದೇ ನೆಪವೊಡ್ಡಿ ಮುಖ್ಯಮಂತ್ರಿ ಪದವಿಯನ್ನು ಡಾ.ಜಿ.ಪರಮೇಶ್ವರ್ ಅವರಿಗೆ ನೀಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಆಯಾ ಭಾಗದಲ್ಲಿ ರಾಜ್ಯ ಛಲವಾದಿ ಮಹಾ ಸಭಾ ವತಿಯಿಂದ ಕಾಂಗ್ರೆಸ್ ವಿರುದ್ಧ ಮತದಾನ ಮಾಡುವುದಾಗಿ ಹಾಗೂ ರಾಜ್ಯ ಮಟ್ಟದ ಪ್ರತಿಭಟನೆ ಇತರೆ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement