ದೃಶ್ಯ ಕಲಾ ಕಾಲೇಜು ಪ್ರವೇಶಕ್ಕೆ ಆಹ್ವಾನ
ಹಾಸನ: ಮೈಸೂರಿನಲ್ಲಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನಲ್ಲಿ ಪ್ರಥಮ ಮೂಲ ತರಗತಿ ಹಾಗೂ ಪ್ರಥಮ ಬಿಎಫ್ಎ ತರಗತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಮೂಲ ತರಗತಿಗೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋವುತಿ 22 ವರ್ಷ, ಪ್ರಥಮ ಬಿಎಫ್ಎ ತರಗತಿಗೆ ದ್ವಿತೀಯ ಮೂಲ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋವುತಿ 24 ವರ್ಷದೊಳಗಿರಬೇಕು. ಅರ್ಜಿ ಸಲ್ಲಿಸಲು ಜೂನ್ 6 ಕಡೆಯ ದಿನವಾಗಿದೆ. ಮೈಸೂರಿನ ಸಯ್ಯಾಜಿರಾವ್ ರಸ್ತೆ, ಸಿಟಿಐ ಕಟ್ಟಡದಲ್ಲಿ ಜೂನ್ 11ರಂದು ಬೆಳಿಗ್ಗೆ 11ಕ್ಕೆ ಅರ್ಹತಾ ಪರೀಕ್ಷೆ ನಡೆಯಲಿದೆ. ಶುಲ್ಕ ಪಾವತಿಗೆ ಜೂನ್ 15 ಅಂತಿಮ ದಿನ. ಜೂನ್ 17ರಿಂದ ತರಗತಿ ಪ್ರಾರಂಭವಾಗಲಿದೆ.