ಭಯ ಅನ್ನೋದು ಗೊತ್ತಿಲ್ಲ
ತುಮಕೂರು: ಭಯ ಅನ್ನೋ ಪದ ತಮ್ಮ ಡಿಕ್ಷನರಿಯಲ್ಲಿ ಇಲ್ಲ. ತಾವು ಯಾರಿಗೂ ಹೆದರುವುದಿಲ್ಲ. ಭಯ ಅನ್ನೋದು ಗೊತ್ತಿಲ್ಲ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್ ತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಹಿಂದಿನ ಶಾಸಕ ಸೊಗಡು ಶಿವಣ್ಣನವರ ಭಯದಿಂದಾಗಿ ತಾವು ಏನನ್ನೂ ಮಾತನಾಡುತ್ತಿರಲಿಲ್ಲ. ಅವರ ಎಲ್ಲ ಕೆಲಸಗಳನ್ನು ಒಪ್ಪಿಕೊಳ್ಳುತ್ತಿದ್ದೆ ಎಂಬುದು ಶುದ್ದ ಸುಳ್ಳು ಎಂದು ಸ್ಪಷ್ಟಪಡಿಸಿದರು.