ಮದುವೆಗೆ ಒಪ್ಪದ ಯುವತಿ ಮೇಲೆ ಹಲ್ಲೆ, ಕೊಲೆಗೆ ಯತ್ನ
ಕನ್ನಡಪ್ರಭ ವಾರ್ತೆ ಜಾವಗಲ್ ಮೇ 10
ತನ್ನನ್ನು ಮದುವೆ ಮಾಡಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಜಾವಗಲ್ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೋಬಳಿಯ ಕಸ್ತೂರಿ ಕೊಪ್ಪಲು ಗ್ರಾಮದ ಸೋಮಶೇಖರ ಎಂಬುವರ ಅಕ್ಕನ ಮಗಳು ಮೋನಿಕಾ ಉರುಫ್ ಮಾನಸ ಎಂಬಾಕೆಯೇ ಹಲ್ಲೆಗೊಳಗಾದವಳು.
ಮೋನಿಕಾ ಬೆಂಗಳೂರು ಆರ್.ಟಿ ನಗರದಿಂದ ಕಸ್ತೂರಿ ಕೊಪ್ಪಲಿನಲ್ಲಿರುವ ತನ್ನ ಅಜ್ಜಿಯನ್ನು ನೋಡಿಕೊಂಡು ಹೋಗಲು ಬಂದಿದ್ದರು. ಮೋನಿಕಾ ಮಾವನ ಮನೆಯ ಹತ್ತಿರ ಇರುವ ವಿಕ್ಕಿ ಉರುಫ್ ವಿಜಯಕುಮಾರ್ ಎಂಬಾತ ತನ್ನನ್ನು ಮದುವೆ ಮಾಡಿಕೊಳ್ಳಲಿಲ್ಲ ಎಂಬ ದ್ವೇಷದಿಂದ ಮೋನಿಕಾ ಹೊಟ್ಟೆಗೆ ತಿವಿದು ಗಾಯಮಾಡಿ ಕೊಲೆ ಮಾಡಲು ಪ್ರಯತ್ನಿದ್ದಾನೆ.
ಗಾಯಗೊಂಡ ಮೋನಿಕಾ ಅರಸೀಕೆರೆ ಜೆ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಜಾವಗಲ್ ಠಾಣೆಗೆ ದೂರು ನೀಡಿದ್ದು, ಆರೋಪಿ ವಿಜಯಕುಮಾರನನ್ನು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.