ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೊರಾರ್ಜಿ ದೇಸಾಯಿ ಕಾಲೇಜಿಗೆ ಆಹ್ವಾನ

Rashmi Kasaragodu
Updated On : 11 May 2013, 12:41 pm

ಹಾಸನ: ತಾಲೂಕಿನ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿಗೆ ಬಿ.ಕಾಟೀಹಳ್ಳಿ ಇಲ್ಲಿಗೆ 2013-14ನೇ ಸಾಲಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ಬಾಲಕ, ಬಾಲಕಿಯರನ್ನು ಪ್ರಥಮ ಪಿಯುಸಿ (ವಿಜ್ಞಾನ) ಪಿಸಿಎಂಬಿ ಮತ್ತು  ಪಿಸಿಎಂಸಿ ಸಂಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲು ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಇಲ್ಲಿ ಮೇ.9ರಿಂದ ಮೇ.28 ರೊಳಗಾಗಿ ವಸತಿ ಕಾಲೇಜಿನ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪೋಷಕರ ವಾರ್ಷಿಕ ಆದಾಯ ಮಿತಿ ಪರಿಶಿಷ್ಟ ಜಾತಿಯವರಿಗೆ 2.00 ಲಕ್ಷ ರು, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ 1.45 ಲಕ್ಷ ರು. ಹಾಗೂ ಹಿಂದುಳಿದ ವರ್ಗ ಅಲ್ಪಸಂಖ್ಯಾತ ವರ್ಗದವರಿಗೆ 44,500 ರು.ಗಳು.  ಆಸಕ್ತಿ ಇರುವ ಬಾಲಕ, ಬಾಲಕಿಯರು  ಬಿ.ಕಾಟೀಹಳ್ಳಿ ಮೊರಾರ್ಜಿ ದೇಸಾಯಿ ಪದವಿ  ಪೂರ್ವ ಕಾಲೇಜು, ಎಸ್.ಬಿ.ಎಂ ಕಾಲೋನಿಯಲ್ಲಿರುವ ಕಾಲೇಜಿನಲ್ಲಿ ಅಥವಾ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿ ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದು ಅರ್ಜಿ ತಲುಪಿಸಲು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement