ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿಗಳ ಪ್ರತಿಭಟನೆ

Rashmi Kasaragodu
Updated On : 11 May 2013, 12:40 pm

ಹಾಸನ: ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ಮತ್ತೆ ಎಸ್.ದಮಯಂತಿ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿ ಪ್ರಾಂಶುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 ಹಿಂದೆ ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಎಸ್. ದಮಯಂತಿ ವಿರುದ್ಧ ವಿದ್ಯಾರ್ಥಿಗಳು ಅನಿರ್ಧಿಷ್ಟಾವಧಿ ಪ್ರತಿಭಟನೆ ಹಾಗೂ ಧರಣಿ ನಡೆಸಿದ ಪರಿಣಾಮ, ದಮಯಂತಿರನ್ನು ಕೆಲ ತಿಂಗಳವರೆಗೆ ರಜೆಯಲ್ಲಿ ಕಳುಹಿಸಲಾಗಿತ್ತು.   ಆಗ ಶೋಭ ಎಂಬುವರನ್ನು ಹಂಗಾಮಿ ಪ್ರಾಂಶಪಾಲೆಯಾಗಿ ನೇಮಿಸಲಾಗಿತ್ತು. ಈಗ ಮತ್ತೆ ದಮಯಂತಿ ಉಪನ್ಯಾಸಕರಾಗಿ ಇದೆ ಕಾಲೇಜಿಗೆ ಬಂದು ಈಗ ಪ್ರಾಂಶುಪಾಲರ ಕುರ್ಚಿಯಲ್ಲಿ ಕುಳಿತಿದ್ದಾರೆ. ಈ ಕೂಡಲೇ ಈ ಕಾಲೇಜಿನಿಂದ ಅವರನ್ನು ವರ್ಗಾಹಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ರಾಯರಿಗೆ ಗಂಧ ಲೇಪನ ಅಲಂಕಾರ
ಹಾಸನ: ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮೇ 13 ರಂದು ಅಕ್ಷಯ ತದಿಗೆ ಅಂಗವಾಗಿ  ಶ್ರೀರಾಮದೇವರಿಗೆ, ರಾಮ ಬಳಗಕ್ಕೆ, ರಾಯರ ಬೃಂದಾನವನಕ್ಕೆ ಗಂಧಲೇಪನ ಅಲಂಕಾರ ಮಾಡಲಾಗುವುದು ಎಂದು  ಗುರುರಾಘವೇಂದ್ರಸ್ವಾಮಿ ಸೇವಾ ಸಮಿತಿ ಗೌರವ ಕಾರ್ಯದರ್ಶಿ ಮ.ವಾ.ಸುಬ್ಬರಾಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement