ವ್ಯಕ್ತಿಯ ಕತ್ತು ಕುಯ್ದು ಕೊಲೆ
ನೆಲಮಂಗಲ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಕಣೇಗೌಡನಹಳ್ಳಿ ಬಳಿ ವ್ಯಕ್ತಿಯೋರ್ವನ ಕತ್ತು ಕುಯ್ದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಕೊಲೆಯಾದ ದುರ್ದೈವಿ ಟಿ.ವಿ.ಎಸ್. ಶೋರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಣೇಗೌಡನಹಳ್ಳಿ ನವೀನ್ಕುಮಾರ್(40) ಎಂದು ಗುರುತಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾರು ಗುದ್ದಿ ವ್ಯಕ್ತಿ ಸಾವು
ನೆಲಮಂಗಲ: ರಾಷ್ಟ್ರೀಯ ಹೆದ್ದಾರೆ 4ರ ದಾನೋಜಿಪಾಳ್ಯದ ಬಳಿ ಅಪರಿಚಿತನಿಗೆ ಸ್ವಿಫ್ಟ್ ಕಾರು ಅತೀ ವೇಗವಾಗಿ ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.ಮೃತ ವ್ಯಕ್ತಿ ಸುಮಾರು 30-32 ವರ್ಷದವನಾಗಿದ್ದು, ಆತ ಕ್ರೀಮ್ ಚೆಕ್ಸ್ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾನೆ. ಆತನ ಬಗ್ಗೆ ಮಾಹಿತಿ ದೊರೆತಿಲ್ಲ. ಮಾಹಿತಿ ಇದ್ದರೆ ನೆಲಮಂಗಲ ಪಟ್ಟಣ ಠಾಣೆ ದೂ080-27722133 ಸಂಪರ್ಕಿಸ ಬೇಕು.