ಕಿಕ್ಕೇರಿಯಲ್ಲಿ ಅದ್ಧೂರಿ ಹನುಮಂತ್ಯುತ್ಸವ
ಕಿಕ್ಕೇರಿ: ಪಟ್ಟಣದಲ್ಲಿ ಕುರುಹಿನಶೆಟ್ಟಿ ಸಮುದಾಯದ ಹಳೆ ರಾಮಮಂದಿರ ವತಿಯಿಂದ ಹನುಮಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಉತ್ಸವ ಅಂಗವಾಗಿ ಪಟ್ಟಣದ ರಾಜಬೀದಿಯಲ್ಲಿ ನಾದಸ್ವರದೊಂದಿಗೆ ಮೆರವಣಿಗೆ ಮಾಡಲಾಯಿತು.
ಯುವಕರು ಬಣ್ಣ ಹಚ್ಚಿ ಕುಣಿದಾಡಿದರು. ಗ್ರಾಮದ ಜನರು ಉತ್ಸವಕ್ಕಾಗಿ ಮನೆ ಮುಂದೆ ಇಟ್ಟಿದ್ದ ಓಕುಳಿ ಬಣ್ಣದ ನೀರನ್ನು ಪರಸ್ಪರ ಎರಚಾಡಿಕೊಂಡು ಸಂಭ್ರಮಪಟ್ಟರು.
ಹಲವರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಆಂಜನೇಯ ಮೂರ್ತಿಗೆ ಭಕ್ತರು ಹಣ್ಣು, ಕಾಯಿ ಅರ್ಪಿಸಿ ಆರತಿ ಬೆಳಗಿ ಭಕ್ತಿ ಮೆರೆದ ರು.