ತಾವು ಸಚಿವ ಆಕಾಂಕ್ಷಿ: ಕೆಎನ್‌ಆರ್
ತುಮಕೂರು: ತಾವು ಕೂಡ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಆಕಾಂಕ್ಷಿಯಾಗಿರುವುದಾಗಿ ಮಧುಗಿರಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಕ್ಷೇತ್ರ ಸಹಕಾರಕ್ಕೆ ಸಂಬಂಧಿಸಿದ್ದು. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ. ಸಹಕಾರ ಕ್ಷೇತ್ರ ಕೊಟ್ಟರೆ ಇಷ್ಟಪಟ್ಟು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಎರಡನೇ ದೇವರಾಜ್ ಅರಸ್ ರೂಪದಲ್ಲಿ ಕಾಣಲು ಪ್ರಯತ್ನಪಡುತ್ತೇವೆ. ಅವರು ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸುವ ಆಶಾಭಾವನೆ ಇದೆ. ಇದಕ್ಕೆ ಕಾರಣ ಅವರ ಹಿಂದಿನ ಬಜೆಟ್ ಹಾಗೂ ಆಡಳಿತವೈಖರಿ ಎಂದ ಅವರು ಸಿದ್ದರಾಮಯ್ಯ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.