ದ್ವಿಚಕ್ರ ವಾಹನ ಸವಾರ ಸಾವು
ಕೋಲಾರ: ಮೋಟಾರ್ ಬೈಕಿಗೆ ಕ್ವಾಲಿಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮಣತಪಟ್ಟು, ಸಹ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರ ಸಮೀಪದ ಟಮಕದ ಬಳಿ ನಿನ್ನೆ ರಾತ್ರಿ ನಡೆದಿದೆ. ನಗರದ ಖಾದ್ರಿಪುರ ವಾಸಿ ಲೊಕೇಶ್ ಬಿನ್ ಶ್ರೀರಾಮಪ್ಪ (32)ಮೃತಪಟ್ಟಿ ಯುವಕನಾಗಿದ್ದಾನೆ. ಜೊತೆಯಲ್ಲಿದ್ದ ಸಹ ಸವಾರ ಮುನೇಶ್ವರ ನಗರದ ವಾಸಿ ಅಂಬರೀಶ್ ಬಿನ್ ರಾಜಶೇಖರ್ (20) ಈ ಯುವಕನ ಕಾಲಿನ ಮೂಳೆ ಮುರಿದಿದ್ದು, ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.