ವಸತಿನಿಲಯಕ್ಕೆ ಅಂಗವಿಕಲ ಮಹಿಳೆಯರಿಂದ ಅರ್ಜಿ ಆಹ್ವಾನ
ಚಾಮರಾಜನಗರ: ಜಿಲ್ಲೆಯ ಸ್ವಯಂಸೇವಾ ಸಂಸ್ಥೆ ಶ್ರೀ ವಿನಾಯಕ ಎಜುಕೇಷನ್ ಸೊಸೈಟಿ ನಗರದಲ್ಲಿ ನಡೆಸುತ್ತಿರುವ ಅಂಗವಿಕಲ ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ತರಬೇತಿದಾರರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
8ನೇ ತರಗತಿಯಿಂದ ವಿಶ್ವವಿದ್ಯಾನಿಲಯದವರೆಗೆ ವ್ಯಾಸಂಗ ಮಾಡುತ್ತಿರುವ ಅಂಗವಿಕಲ ವಿದ್ಯಾರ್ಥಿನಿಯರು, ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ ಉಚಿತವಾಗಿ ವಸತಿನಿಲಯದಲ್ಲಿ ಎಲ್ಲ ಸೌಲಭ್ಯ ನೀಡಲಾಗುತ್ತದೆ. ಉದ್ಯೋಗಸ್ಥ ಮಹಿಳೆಯರು ಆಹಾರದ ವೆಚ್ಚ ಮಾತ್ರ ಪಾವತಿಸಬೇಕಿದೆ. ಆಸಕ್ತ ಅಭ್ಯರ್ಥಿಗಳು ಅಂಗವಿಕಲರ ಗುರುತಿನ ಚೀಟಿ, 2 ಭಾವಚಿತ್ರ, ವಾಸಸ್ಥಳ ದೃಢೀಕರಣ, ವಿದ್ಯಾರ್ಥಿಗಳಾಗಿದ್ದಲ್ಲಿ ವ್ಯಾಸಂಗ ದೃಢೀಕರಣ, ಉದ್ಯೋಗಸ್ಥರಾಗಿದ್ದಲ್ಲಿ ಮೇಲಾಧಿಕಾರಿಗಳಿಂದ ದೃಢೀಕರಣ ಪತ್ರ ನೀಡಬೇಕು. ಅಗತ್ಯ ದಾಖಲೆಗಳೊಂದಿಗೆ ನಗರದ ಭ್ರಮರಾಂಬ 3ನೇ ಕ್ರಾಸ್(ಅಗ್ನಿಶಾಮಕ ದಳ ಕಚೇರಿ ಎದುರು)ನಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ನಿಲಯ (9916876587) ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.