ಹೋಪ್ಫಾಸ್ಟ್ನಿಂದ ಗೊಬ್ಬರ ವಿತರಣೆ
ಕ.ಪ್ರ.ವಾರ್ತೆ ಚಾ.ನಗರ ಮೇ 11
ಬೆಂಗಳೂರಿನ ಹೋಮ್ಫಾಸ್ಟ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ತಾಲೂಕಿನ ಆರು ಗ್ರಾಮಗಳಲ್ಲಿ 600 ಜನ ಪರಿಶಿಷ್ಟ ಜಾತಿ, ವರ್ಗದ ರೈತರಿಗೆ ಜೈವಿಕ ಕೀಟನಾಶಕ, ಜೈವಿಕ ಗೊಬ್ಬರಗಳ ಬಳಕೆ ಬಗ್ಗೆ ತರಬೇತಿ ನೀಡಲಾಯಿತು.
ತರಬೇತಿ ಪಡೆದ ರೈತರಿಗೆ ಒಂದು ಸಾವಿರ ಮೌಲ್ಯದ 500 ಕೆಜಿ ಗೊಬ್ಬರ ನೀಡಲಾಯಿತು. ಈ ಹಿಂದೆ ತರಬೇತಿ ಪಡೆದು ಜೈವಿಕ ಗೊಬ್ಬರ ಬಳಸಿ, ರೈತರು ಬೆಳೆದ ಬಾಳೆ, ಕಬ್ಬು, ಟೊಮ್ಯಾಟೊ, ಬತ್ತ ಹಾಗೂ ರಾಗಿಯಲ್ಲಿ ಶೇ.20ರಷ್ಟು ಹೆಚ್ಚು ಇಳವರಿ ಪಡೆದು ಲಾಭ ಗಳಿಸಿದ್ದರು. ಈ ಬೆಳೆಗಳನ್ನು ರೈತರು ಪ್ರದರ್ಶನಕ್ಕೆ ಇಟ್ಟಿದ್ದರು.
ತಾಲೂಕಿನ ಬಾಗಳಿ ಗ್ರಾಮದ ರೈತರಿಂದ ಸಂಸ್ಥೆ ಹಾಗೂ ವಿಜ್ಞಾನ ಮತ್ತು ತಾಂತ್ರಿಕ ಇಲಾಖೆ ವತಿಯಿಂದ 75 ಪರಿಶಿಷ್ಟ ವರ್ಗದ ಮನೆಗಳಿಗೆ ಸುಮಾರು ಒಂದು ಗಂಟೆ ಕಾಲ ಬೆಳಗುವ ಸೌರಶಕ್ತಿಯ ಎಲ್ಐಇಡಿ ಬಲ್ಬ್ಗಳನ್ನು ರಾಜ್ಯ ವಿಜ್ಞಾನ ಮತ್ತು ತಾಂತ್ರಿಕ ಕೇಂದ್ರದ ಡಾ. ಪೃಥ್ವಿರಾಜ್ ವಿತರಿಸಿದರು.
ಹಾಜರಿದ್ದ ತೋಟಗಾರಿಕೆ ಸಂಸ್ಥೆ ವಿಜ್ಞಾನಿಗಳಾದ ಡಾ. ಎಂ.ಶ್ರೀನಿವಾಸರಾವ್, ಡಾ. ಶಿವಾನಂದ ರೈತರೊಂದಿಗೆ ಸಂವಾದ ನಡೆಸಿ ರೈತರ ಪ್ರಶ್ನೆಗಳಿಗೆ ಉತ್ತರಿಸಿ, ಮುಂದೆ ತಮ್ಮ ತೋಟಗಾರಿಕೆ ಬೆಳೆಗಳಿಗೆ ಮಾರ್ಗದರ್ಶನ ಬೇಕಿದ್ದರೆ ತಮ್ಮನ್ನು ದೂರವಾಣಿ ಮುಖಾಂತರ ಸಂಪರ್ಕಿಸುವಂತೆ ತಿಳಿಸಿದರು.