ಇಂದು ಸುಧಾಕರ್ ಲಾಲ್‌ಗೆ ಸನ್ಮಾನ
ತುಮಕೂರು: ಕೊರಟಗೆರೆ ಕ್ಷೇತ್ರದ ನೂತನ ಶಾಸಕ ಸುಧಾಕರ್‌ಲಾಲ್ ಅವರಿಗೆ ಇದೇ ತಿಂಗಳ 13 ರಂದು ಬೆಳಗ್ಗೆ 11 ಕ್ಕೆ ಕೊರಟಗೆರೆ ತಾಲೂಕು ಸೂರ್ಯಪುರದಲ್ಲಿ ಕುಂಚಿಟಗರ ಮಹಾಸಂಘ ಮತ್ತು ಶ್ರೀ ಕ್ಷೇತ್ರ ಸೂರ್ಯಪುರದ ವತಿಯಿಂದ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಪ್ರಧಾನ ಅರ್ಚಕ ರವೀಂದ್ರಕುಮಾರ್ ಸ್ವಾಮೀಜಿ, ನಾಗೇಂದ್ರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ರಾಮಣ್ಣ ಸ್ವಾಮೀಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪ್ರೇಮಾ ಮಹಾಲಿಂಗಪ್ಪ, ಮಮತ ಶಿವಲಿಂಗಯ್ಯ, ರಂಗಮುತ್ತಯ್ಯ, ಟಿ.ಎಂ. ಮಂಜುನಾಥ್ ಆಗಮಿಸಲಿದ್ದಾರೆ.
ಬ್ಲಾಕ್ ಕಾಂಗ್ರೆಸ್‌ಗೆ ನೇಮಕ
ತುಮಕೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ರಿಯಾಜ್ ಉಲ್ಲಖಾನ್ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದ್ದಾರೆ.
19 ರಂದು ಸಂಗೀತ ಸ್ಪರ್ಧೆ
ಇಲ್ಲಿನ ರಾಘವೇಂದ್ರ ಸಂಗೀತ ಸಭಾದ ಆಶ್ರಯದಲ್ಲಿ ಪುರಂದರ ದಾಸರ ಮತ್ತು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಇದೇ ತಿಂಗಳ 19 ರಂದು ಭಾನುವಾರ ಅಂತರ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ಲಲಿತಾ ಚಲಂ ತಿಳಿಸಿದ್ದಾರೆ.
15 ರಿಂದಸಾಮೂಹಿಕ ಲಸಿಕೆ
ತುಮಕೂರು ಜಿಲ್ಲೆಯಲ್ಲಿ ಎಲ್ಲಾ ಕುರಿ ಮತ್ತು ಮೇಕೆಗಳಿಗೆ ಪಿಪಿಆರ್ ರೋಗದ ವಿರುದ್ಧ 2ನೇ ಸುತ್ತಿನ ಉಚಿತ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ಇದೇ ತಿಂಗಳ 15 ರಿಂದ ಮುಂದಿನ ತಿಂಗಳ 15ರವರೆಗೆ ಆಯೋಜಿಸಲಾಗಿದೆ.
ಪ್ರತಿಭಾ ಪುರಸ್ಕಾರ; ಅರ್ಜಿ ಆಹ್ವಾನ
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಶೇ.90 ಕ್ಕೂ ಅಧಿಕ ಅಂಕ ಪಡೆದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಮತ್ತು ಕನ್ನಡ ಮಾಧ್ಯಮದಲ್ಲಿ ಶೇ. 85 ಕ್ಕೂ ಹೆಚ್ಚು ಅಂಕ ಪಡೆದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಆಸಕ್ತರು ಇದೇ ತಿಂಗಳ 30 ರೊಳಗೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಕೋರ್ಟ್ ರಸ್ತೆ, ತುಮಕೂರು ಇಲ್ಲಿಗೆ ಅಂಚೆ ಮೂಲಕ ಕಳುಹಿಸಬಹುದು.