ಎಸ್ಬಿಐನಿಂದ ಶಾಲೆಗೆ ಫ್ಯಾನ್ಗಳ ವಿತರಣೆ...
ಕ.ಪ್ರ.ವಾರ್ತೆ ಚಿಂತಾಮಣಿ ಮೇ12
ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಉಚಿತ ಸೀಲಿಂಗ್ ಫ್ಯಾನ್ಗಳನ್ನು ಸದುಪಯೋಗಪಡಿಸಿಕೊಳ್ಳಲು ಶಿಕ್ಷಕರ ಜವಾಬ್ದಾರಿಯೆಂದು ಎಸ್ಬಿಐ ಶಾಖೆಯ ವ್ಯವಸ್ಥಾಪಕರಾದ ಪೂರ್ಣಿಮಾ ಕಿವಿಮಾತು ಹೇಳಿದರು.
ನಗರದ ಚೌಡರೆಡ್ಡಿಪಾಳ್ಯದಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಗೆ ಎಸ್ಬಿಐ ಶಾಖೆ ಕಡೆಯಿಂದ ಉಚಿತವಾಗಿ 5 ಸೀಲಿಂಗ್ ಫ್ಯಾನುಗಳನ್ನು ಶಾಲೆಗೆ ನೀಡಿ ನಂತರ ಮಕ್ಕಳನ್ನು ಉದ್ದಶಿಸಿ ಮಾತನಾಡಿದರು.
ಅಲ್ಪಸಂಖ್ಯಾತರ ಬಡಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ನೀಡುವ ಸೀಲಿಂಗ್ ಫ್ಯಾನುಗಳನ್ನು ಶಾಲೆಯ ಶಿಕ್ಷಕರು ಜವಾಬ್ದಾರಿಯಿಂದ ಸದುಪಯೋಗಪಡಿಸಿಕೊಂಡು ಕಾಪಾಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಸಹಶಿಕ್ಷಕಿ ಶಾಹಿರಾ ಬಾನು, ಎಸ್ಬಿಐನ ಅಧಿಕಾರಿ ರಾಮಕೃಷ್ಣಪ್ಪ, ಚಂದ್ರ ಸೇರಿದಂತೆ ಶಾಲೆಯ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.