ಡಿಕ್ಕಿ: ಇಬ್ಬರು ಸಾವು
ಚನ್ನರಾಯಪಟ್ಟಣ: ಬೈಕ್ಗೆ ಕಾರು ಡಿಕ್ಕಿ ಮಾಡಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬಿ.ಎಂ.ರಸ್ತೆ ಗೌಡಗೆರೆ ಸಮೀಪ ಶನಿವಾರ ನಡೆದಿದೆ. ಆಂಧ್ರಪ್ರದೇಶದ ಸುರೇಶ (28) ಮತ್ತು ರಾಜೇಶ್ (32) ಸಾವನ್ನಪ್ಪಿದ ದುರ್ದೈವಿಗಳು. ಪಟ್ಟಣದ ಸಂಪಿಗೆ ರಸ್ತೆಯ ನಂದಕುಮಾರ್ ಎನ್.ಎಚ್.48 ರಸ್ತೆ ಅಗಲೀಕರಣ ಕಂಪನಿಯಲ್ಲಿ ಪಿಆರ್ಒ ಆಗಿದ್ದು, ಅದೇ ಕಂಪನಿಯಲ್ಲಿ ಆಂಧ್ರಪ್ರದೇಶದ ಸುರೇಶ ಮತ್ತು ರಾಜೇಶ ಎಂಬುವರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.