ನನ್ನ ಮಗ ಕ್ಷೇತ್ರದಲ್ಲಿಗೆಲ್ಲದಿದ್ದರೇನು...?
ತುಮಕೂರು: ನನ್ನ ಮಗ ಗೆಲ್ಲದಿದ್ದರೇನು. ಮತ್ತೊಬ್ಬ ಒಳ್ಳೆಯ ವ್ಯಕ್ತಿ ತುಮಕೂರು ನಗರ ಶಾಸಕನಾಗಿ ಆಯ್ಕೆಯಾಗಿದ್ದಾರಲ್ಲ. ಇದೊಂದು ಸಂತಸದ ವಿಷಯ. ಇವು ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ ತಮ್ಮ ಮಗನ ಪರಾಜಯದ ಕುರಿತಂತೆ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀವ್ರ ಪೈಪೋಟಿ ನೀಡಿದ ಕೆಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಸೋತಿದ್ದು ಸೊಗಡು ಶಿವಣ್ಣನವರ ಮತದಾರರ ಪಟ್ಟಿ ಡಿಲೀಟ್ ರಾಜಕೀಯದಿಂದ. ಇಲ್ಲದಿದ್ದರೆ ತಮ್ಮ ಮಗ ತುಮಕೂರು ನಗರ ಶಾಸಕರಾಗಿ ಆಯ್ಕೆಯಾಗುತ್ತಿದುದು ಖಚಿತ. ಆದರೆ ಕಾಂಗ್ರೆಸ್ ಅಭ್ಯರ್ಥಿ ಡಾ. ರಫೀಕ್ ಅಹಮದ್ ನಗರ ಶಾಸಕರಾಗಿ ಆಯ್ಕೆಯಾಗಿದ್ದು ಸಂತಸದ ಸಂಗತಿ. ಅವರೊಬ್ಬ ಸಜ್ಜನ ಎಂದರು.