ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಬೆಟ್ಟಸ್ವಾಮಿ
ಗುಬ್ಬಿ: ಕೆಲ ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆ ವದಂತಿಗಳಿಗೆ ಕ್ಷೇತ್ರದ ಮತದಾರರು ಕಿವಿ ಕೊಡಬಾರದೆಂದು ಕೆಜೆಪಿ ಪರಾಜಿತ ಅಭ್ಯರ್ಥಿ ಜಿ.ಎನ್.ಬೆಟ್ಟಸ್ವಾಮಿ ತಿಳಿಸಿದರು.
ಅವರು ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಕ್ಷೇತ್ರದ ಎಲ್ಲಾ ಮತದಾರಿಗೆ, ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸಿದರು.
ಇನ್ನು ಮಂದೆ ತಾಲೂಕಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ನಿರಂತರ ಹೋರಾಟ ನಡೆಸುವುದಾಗಿ ತಿಳಿಸಿದ ಅವರು ಜಿಲ್ಲೆಯ ಸಂಸದರಾದ ಜಿ.ಎಸ್.ಬಸವರಾಜು ಅವರ ನೇತ್ರಾವತಿ ತಿರುವು ಯೋಜನೆಗೆ ನಾವುಗಳು ಸಹ ಒಗ್ಗಟ್ಟಿನಿಂದ ಪೂರ್ಣಪ್ರಮಾಣದಲ್ಲಿ ಕೈಜೋಡಿಸುತ್ತೇವೆ ಎಂದರು.
ಕೆಲವರು ಕುತಂತ್ರ ರಾಜಕಾರಣ ಮಾಡಿದ್ದರಿಂದ ನನ್ನ ಸೋಲಿಗೆ ಕಾರಣವಾಯಿತು. ಮತದಾರರು ಮತವನ್ನು ನೀಡಿರುವುದನ್ನು ನೋಡಿದರೆ ಅದು ಸೋಲಲ್ಲ. ಗೆಲವಿನ ಮೆಟ್ಟಿಲು. ಅಲ್ಲದೆ ಸಮಾನತೆಯನ್ನು ಸಾರುತ್ತಾ, ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ತರಲು ಹೊರಟಿರುವ ಹಿಂದುಳಿದ ವರ್ಗಗಳ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಜಿಪಂ ಸದಸ್ಯ ಪಿ.ಬಿ.ಚಂದ್ರಶೇಖರ್ ಬಾಬು, ಕೆ.ಬಿ.ಕೃಷ್ಣಪ್ಪ, ಅಶೋಕ್‌ಕುಮಾರ್, ವಕೀಲ ಕ್ಷೀರಕುಮಾರ್, ಕೆ.ಟಿ.ಕೆ.ಪ್ರಭು ಇದ್ದರು.