ಅಪರಿಚಿತ ವಾಹನಕ್ಕೆ ಕರಡಿ ಬಲಿ
ಗುಬ್ಬಿ: ಅಪರಿಚಿತ ವಾಹನಕ್ಕೆ ಸಿಲುಕಿ ಕರಡಿಯೊಂದು ಸಾವನ್ನಪ್ಪಿದ ಘಟನೆ ತಾಲೂಕಿನ ಶಿವಸಂದ್ರ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಸಮಾರು 8 ವರ್ಷಗ ಗಂಡು ಕರಡಿ ರಾತ್ರಿ ವೇಳೆ ಹೆದ್ದಾರಿ ದಾಟುವ ಸಂದರ್ಭದಲ್ಲಿ ವಾಹನಕ್ಕೆ ಸಿಲುಕಿ ಮೃತಪಟ್ಟಿದೆ.ತಾಲೂಕಿನ ಶಿವಸಂದ್ರ ಅರಣ್ಯ ಪ್ರದೇಶದಲ್ಲಿ ಕರಡಿಗಳು ಸಾಕಷ್ಟಿದ್ದು ಅವುಗಳ ಸಂರಕ್ಷಣೆ ಅಗತ್ಯವಿದೆ ಎಂದು ಗ್ರಾಮಸ್ಥರು ತಿಳಿಸಿದ್ದರೆ.ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಮಾರ್ಕೊಂಡಯ್ಯ ಹಾಗೂ ವಲಯ ಅರಣ್ಯಾಧಿಕಾರಿ ಹರೀಶ್ ಪರಿಶೀಲನೆ ನಡೆಸಿದರು. ಮೃತಪಟ್ಟ ಕರಡಿಯ ಕಳೆ ಬರಹವನ್ನು ಅರಣ್ಯ ಪ್ರದೇಶದಲ್ಲಿ ವಿಧಿವತ್ತಾಗಿಯೇ ಅಗ್ನಿ ಸ್ವರ್ಶಿಸಿ ಅಂತ್ಯ ಸಂಸ್ಕಾರವನ್ನು ಅರಣ್ಯ ಇಲಾಖೆ ನಡೆಸಿಕೊಟ್ಟರು.