ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಹಬ್ಬ
ಪಾವಗಡ : ಅಹಿಂದ ಮುಖಂಡ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ಮಚನ ಸ್ವೀಕರಿಸುತ್ತಿದ್ದಂತೆ ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ನಂತರ ತಾ.ಕಾಂಗ್ರೆಸ್ ಅಧ್ಯಕ್ಷ ಸುದೇಶ್‌ಬಾಬು ಹಾಗೂ ತಾ.ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ.ವೆಂಕಟೇಶ್ ನೇತೃತ್ವದಲ್ಲಿ ಸೇರಿದ್ದ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಿ ಸಿದ್ದರಾಮಯ್ಯ ಪರ ಜೈಕಾರದ ಘೋಷಣೆ ಕೂಗಿದರು. ಗ್ರಾಮೀಣಾ ಪ್ರದೇಶಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಸಿದ್ಧರಾಮಯ್ಯ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಮಾಜಿ ಜಿಪಂ ಅಧ್ಯಕ್ಷ ಜಂಪಯ್ಯ,ತಾಳೇಮರದಹಳ್ಳಿ ನರಸಿಂಹಯ್ಯ,ಮುಗದಾಳಬೆಟ್ಟ ನರಸಿಂಹಪ್ಪ ಎಲ್‌ಐಸಿ ಗೋವಿಂದರಾಜು, ನಾಗರ್ಜುನರೆಡ್ಡಿ, ನಂಜುಂಡಸ್ವಾಮಿ,ರಾಜೇಶ್ ತಾಪಂ ಸದಸ್ಯ ಚನ್ನಮಲ್ಲಯ್ಯ ಅಲ್ಪಸಂಖ್ಯಾತರ ಮುಖಂಡ ರಿಜ್ಜವಾನ್‌ವುಲ್ಲಾ ಮುಂತಾದವರಿದ್ದರು.