ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆಂಕೆರೆ: ಅದ್ಧ್ದೂರಿ ಚನ್ನಬಸವೇಶ್ವರ ರಥೋತ್ಸವ

Rashmi Kasaragodu
Updated On : 14 May 2013, 12:08 pm

ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಮೇ 13 ರ ಸೋಮವಾರ ಮಧ್ಯಾಹ್ನ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ನೂರಾರು ಭಕ್ತರ ಹರ್ಷೋದ್ಗಾರದ ನಡುವೆ ವೈಭವಯುತವಾಗಿ ಜರುಗಿತು.
ಜಾತ್ರೆಯ ಅಂಗವಾಗಿ ಮೇ 11ರ ಶನಿವಾರ ಬೆಳಿಗ್ಗೆ ಸ್ವಾಮಿಯವರ ಧ್ವಜಾರೋಹಣ ನಡೆದಿತ್ತು. ಮೇ 12ರ ಭಾನುವಾರ ಬೆಳಗಿನ ಜಾವ ಸ್ವಾಮಿಯ ಗಂಗಾಪ್ರವೇಶ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳೊಂದಿಗೆ ಪ್ರಸಾದ ವಿನಿಯೋಗ ನಡೆದು, ಅದೇ ದಿನ ಕೆಂಕೆರೆ ಗ್ರಾಮಕ್ಕೆ ಆಗಮಿಸಿದ ಸ್ವಾಮಿಯನ್ನು ನಡೆಮುಡಿಯೊಂದಿಗೆ ದೇವಾಲಯಕ್ಕೆ ಕರೆತರಲಾಗಿತ್ತು. 13ರ ಮುಂಜಾನೆ ಮಹದೇವಮ್ಮ, ಚನ್ನಬಸವಯ್ಯ ದಂಪತಿಗಳು ಹಾಗೂ ಈಶ್ವರಪ್ಪ ನವರಿಂದ ರಥಕ್ಕೆ ಪುಣ್ಯಾಹ ಕಾರ್ಯ ನಡೆಸಿ ಕಳಸ ಸ್ಥಾಪಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಸ್ವಾಮಿಯನ್ನು ಬಸವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆತಂದು, ರಂಗುರಂಗಿನ ಬಾವುಟ, ಎಳನೀರ ಗೊಂಚಲು, ಬಾಳೆಗೊನೆ, ಕೊಬ್ಬರಿಹಾರ ಸೇರಿದಂತೆ ವಿವಿಧ ಮಾದರಿಯ ಹೂ ಹಾರಗಳಿಂದ ಶೃಂಗರಿಸಿದ್ದ ರಥಕ್ಕೆ ಕಾಳಿಕಾಂಬ ದೇವಿಯೊಂದಿಗೆ ಕುಳ್ಳಿರಿಸಲಾಯಿತು. ನೆರೆದಿದ್ದ ನೂರಾರು ಜನ ಜಯಘೋಷಗಳನ್ನು ಕೂಗುತ್ತಾ ತೇರನ್ನೆಳೆದು ಸಂಭ್ರಮಿಸಿದರೆ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದವರು ರಥದ ಗಾಲಿಗೆ ಕಾಯಿ ಹೊಡೆದು ಪೂಜೆ ಸಲ್ಲಿಸಿದರು. ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಪಾನಕ, ಪನಿವಾರ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement