ಜೆಡಿಎಸ್ ಮುಖಂಡರ ರೋಡ್‌ಶೋ
ಕ.ಪ್ರ.ವಾರ್ತೆ ಪಾವಗಡ ಮೇ 13
ಚುನಾವಣೆಯಲ್ಲಿ ತಾಲೂಕಿನಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಸೋಮವಾರ ನಿಡಗಲ್ ಹೋಬಳಿ ವ್ಯಾಪ್ತಿಯಲ್ಲಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಸೇರಿದಂತೆ ಜೆಡಿಎಸ್ ಮುಖಂಡರು ರೋಡ್‌ಶೋ ನಡೆಸಿದರು.
ಪ್ರಾರಂಭದಲ್ಲಿ ನಿಡಗಲ್ ವ್ಯಾಪ್ತಿಯ ಅರಸೀಕೆರೆ, ಮಂಗಳವಾಡ, ಲಿಂಗದಹಳ್ಳಿ ಹಾಗೂ ಕಸಬಾ ವ್ಯಾಪ್ತಿಯ ಸಿ.ಕೆ.ಪುರ, ಚನ್ನಸಾಗರದಹಟ್ಟಿ, ಬ್ಯಾಡನೂರು, ಕಿಲಾರ್ಲಹಳ್ಳಿ ಕೊತ್ತೂರು ಮುಂತಾದ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು ತಮಟೆ ಸೇರಿದಂತೆ ವಿವಿಧ ವಾದ್ಯಗೋಷ್ಠಿಗಳೊಂದಿಗೆ ತಮ್ಮ ಗ್ರಾಮಗಳಿಗೆ ಮುಖಂಡರನ್ನು ಬರ ಮಾಡಿಕೊಂಡು ಅದ್ದೂರಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ಪಕ್ಷದ ತಾ,ಅಧ್ಯಕ್ಷ ತಿಮ್ಮಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಮುಖಂಡರಾದ ಬೆಟ್ಟದ ಈರಣ್ಣ, ಮದ್ದಿಬಂಡೆ ತಿಪ್ಪೇಸ್ವಾಮಿ, ಕೆ.ವಿ.ಗಿರಿರಾಜ್, ತಾಪಂ ಸದಸ್ಯೆ ನರಸಮ್ಮ, ಎಸ್.ಸಿ.ಘಟಕದ ಅಧ್ಯಕ್ಷ ಬಿ.ಹೊಸಹಳ್ಳಿ ಮಲ್ಲಿಕಾರ್ಜುನ, ದಲಿತ್‌ಕುಮಾರ್, ಚನ್ನಸಾಗರ ಮಲ್ಲೇಶ್ ಮುಂತಾದವರಿದ್ದರು.