ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಾಳೆ ಕೇರಳಕ್ಕೆ ತೆಂಗು ಬೆಳೆಗಾರರ ನಿಯೋಗ

Rashmi Kasaragodu
Updated On : 14 May 2013, 12:53 pm

ತುಮಕೂರು:  ತೆಂಗು ಬೆಳೆಗಾರರು ಇಂದು ತತ್ತರಿಸಿ ಹೋಗಿದ್ದಾರೆ. ಮಳೆ ಇಲ್ಲದೆ ಬೋರುಗಳು ಬತ್ತಿ ತೆಂಗಿನ ಮರಗಳ ಸುಳಿ ಬೀಳುತ್ತಿವೆ. ಬೆಳೆದ ಬೆಳೆಗೆ ಬೆಲೆಯಿಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕಲು 45 ಜನರ ತೆಂಗು ಬೆಳೆಗಾರರ ನಿಯೋಗ ಕೇರಳ ರಾಜ್ಯಕ್ಕೆ ಇದೇ ತಿಂಗಳ 14 ರಿಂದ ನಾಲ್ಕು ದಿವಸಗಳ ಕಾಲ ಪ್ರವಾಸ ಹೊರಡಲಿದೆ.
ಈ ಸಂದರ್ಭದಲ್ಲಿ ತೆಂಗು ಸಂಶೋಧನಾ ಕೇಂದ್ರ ಸಿಪಿಸಿಆರ್‌ಐ ಕಾಸರಗೋಡು, ಕಣ್ಣೂರಿನ ರೈತರ ಮಾಲ್, ಕೋಝಿಕೊಡು ಸಮೀಪದ ಸುಭಿಕ್ಷ, ಕೊಕೊನಟ್ ಲ್ಯಾಬ್, ರೈತರ ಕಂಪನಿಗಳು ಇತ್ಯಾದಿ ರೈತರೇ ರೂಪಿಸಿಕೊಂಡಿರುವ ತೆಂಗಿನ ಉದ್ದಿಮೆಗಳಿಗೆ ಭೇಟಿ ನೀಡಲಿದೆ.
ಅಲ್ಲಿನ ಮೌಲ್ಯವರ್ಧನೆ ಮತ್ತು ಉದ್ಯಮಶೀಲತೆಯ ಪ್ರಕ್ರಿಯೆಯನ್ನು ತಂಡ ಅಧ್ಯಯನ ಮಾಡಲಿದೆ. ತೆಂತಾ ಎಣ್ಣೆ ಉದ್ದಿಮೆಗಳು, ಕೊಕೊನಟ್ ಚಿಪ್ಸ್, ವಿನೆಗರ್ ಇತ್ಯಾದಿ ನೂರಾರು ತೆಂಗಿನ ಉತ್ಪನ್ನಗಳ ಘಟಕಗಳನ್ನು ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಲಿದೆ. ದಿನಾಂಕ 17 ರಂದು ಕೊಚ್ಚಿಯ ತೆಂಗು ಅಭಿವೃದ್ಧಿ ಮಂಡಳಿಯ ಛೇರ್‌ಮನ್ ಜೊತೆ ಸಮಾಲೋಚನೆ ನಡೆಸಿ ರಾಜ್ಯದ ತೆಂಗು ಬೆಳೆಗಾರರ ಉಳಿವಿಗೆ ಹಕ್ಕೊತ್ತಾಯಗಳನ್ನು ಮಂಡಿಸಲಿದೆ.
ತೆಂಗು ಬೆಳೆಗಾರರ ಪರವಾಗಿ  ಹೋರಾಟ ನಡೆಸುತ್ತಿರುವ ಅಣೇಕಟ್ಟೆ ವಿಶ್ವನಾಥ್‌ರವರು ರೂಪಿಸಿ ನಿರ್ದೇಶಿಸುತ್ತಿರುವ ಈ ನಿಯೋಗದಲ್ಲಿ ರಾಜ್ಯ ತೆಂಗುಬೆಳೆಗಾರರ ಸಂಘದ ಸಂಚಾಲಕರಾದ ಮಾಚೇನಹಳ್ಳಿ ಸಿದ್ದಬಸಪ್ಪ, ಹಾಗೂ ಡಾ.ನಂಜಪ್ಪ, ಪ್ರೊ. ನಂಜುಂಡಪ್ಪ, ತಂಡಗದ ಸೋಮಣ್ಣ, ಜಿ.ಆರ್. ರಂಗೇಗೌಡ ಜಯಪ್ರಸಾದ್ ಬಳ್ಳೇಕೆರೆ, ಬಿ.ಎಚ್, ಶಿವಣ್ಣ ಗುಬ್ಬಿ, ಇನ್ನಿತರರು ಇರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement