ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕನ್ನಡ ಪಂಡಿತ್ ಪದವಿಗೆ ಆಹ್ವಾನ

Vishwanath S
Updated On : 15 May 2013, 12:15 pm

ತುಮಕೂರು: ಸಿದ್ದಗಂಗಾ ಮಠದಲ್ಲಿರುವ ಸಿದ್ದಲಿಂಗೇಶ್ವರ ಬಿ.ಎ. ಇಂಟಿಗ್ರೇಟೆಡ್ ಕನ್ನಡ ಪಂಡಿತ್ ಪದವಿ ಕಾಲೇಜು ವತಿಯಿಂದ 2013-14 ನೇ  ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ ನಂತರದ  5 ವರ್ಷಗಳ 10 ಸೆಮಿಸ್ಟರ್‌ಗಳ ಇಂಟಿಗ್ರೇಟೆಡ್ ಕೋರ್ಸ್ ಆಗಿದ್ದು, ಪದವಿ ಪಡೆದವರು ಬಿಇಡಿ, ಸಂಸ್ಕೃತ, ಕನ್ನಡ, ಇಂಗ್ಲಿಷ್, ಇತಿಹಾಸ ವಿಭಾಗಗಳಲ್ಲಿ ಎಂ.ಎ. ಪದವಿಗೆ ಹಾಗೂ ಬಿಪಿಇಡಿ, ಎಂಎಸ್‌ಡಬ್ಲ್ಯೂ ಮೊದಲಾದ ಉನ್ನತ ಶಿಕ್ಷಣವನ್ನು ಪಡೆಯಬಹುದಾಗಿದೆ. 50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9880821117, 9844782700 ಸಂಪರ್ಕಿಸುವಂತೆ ಕೋರಲಾಗಿದೆ.

ಇಂದಿನಿಂದ ಶಂಕರ ಜಯಂತಿ ಸಪ್ತಾಹ
ತಿಪಟೂರು: ನಗರದ ಶೃಂಗೇರಿ ಶಂಕರಮಠದಲ್ಲಿ ಶಂಕರ ಜಯಂತಿ ಸಪ್ತಾಹ ಕಾರ್ಯಕ್ರಮವು ಮೇ 15ರಿಂದ ಮೇ 22ರವರೆಗೆ ನಡೆಯಲಿದೆ. ಇಂದು ಬೆಳಗ್ಗೆ 10 ಗಂಟೆಗೆ ತಾಲೂಕು ಬ್ರಾಹ್ಮಣ ಗೆಳೆಯರ ಬಳಗದ ವತಿಯಿಂದ ಶ್ರೀ ಶಂಕರ ಭಗವತ್ಪಾದರ ಜಯಂತಿ ಅಂಗವಾಗಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ಸಂಜೆ 5.30ಕ್ಕೆ ಶ್ರೀ ಶಂಕರಭಗವತ್ಪಾದ ವಿರಚಿತ ಆನಂದಸಿಂಧು ಪಾರಾಯಣವನ್ನು ನಡೆಸಲಾಗುವುದು.  ಪ್ರತಿದಿನ ಶ್ರೀ ಚಂದ್ರಮೌಳಿಸ್ವಾಮಿರವರಿಗೆ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಶಂಕರಾಚಾರ್ಯರಿಗೆ ಷೋಡಶೋಪಚಾರ ಪೂಜೆ ಹಾಗೂ ಸತ್ಸಾಂಗ ಕಾರ್ಯಕ್ರಮಗಳು ನಡೆಯಲಿದೆ.


ಸೃಜನಾತ್ಮಕ ಬೇಸಿಗೆ ಶಿಬಿರ
ತುಮಕೂರು:  ಶಿಶು ಅಭಿವೃದ್ದಿ ಯೋಜನೆ, ತುಮಕೂರು ನಗರ ಸಹಯೋಗದಲ್ಲಿ 15 ರಿಂದ 16 ವರ್ಷದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವಂತೆ, ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳ ಬೇಸಿಗೆ ಶಿಬಿರವನ್ನು ಮೇ 15 ರಿಂದ 24 ರವರೆಗೆ ಏರ್ಪಡಿಸಲಾಗಿದೆ. ಶ್ರೀ ವೀರಭದ್ರೇಶ್ವರ ಸ್ವಾಮಿ  ವಿದ್ಯಾಸಂಸ್ಥೆ, ರಾಘವೇಂದ್ರ ಗುರುಕುಲ, ಸುಶೀಲಮ್ಮ ಬಿಲ್‌ಡಿಂಗ್, ನಮ್ಮೂರ ಆಹಾರ್ ಹತ್ತಿರ, 7ನೇ ಕ್ರಾಸ್, ಎಸ್.ಎಸ್.ಪುರಂ, ಇಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಶಿಬಿರದಲ್ಲಿ ಚಿತ್ರಕಲೆ, ಜೇಡಿಮಣ್ಣಿನ ಕಲೆ, ಸಮೂಹ ಗೀತೆ, ಸಮೂಹ ನೃತ್ಯ, ಬೊಂಬೆ ತಯಾರಿಕೆ, ಮೆಹಂದಿ, ರಂಗ ತರಬೇತಿ, ಕಸದಿಂದ ರಸ, ರಂಗೋಲಿ, ಉಪನ್ಯಾಸ, ಪ್ರಾತ್ಯಕ್ಷಿಕೆ ಹೇಳಿ ಕೊಡಲಿದ್ದು, ಆಸಕ್ತ ಮಕ್ಕಳು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, 9 ನೇ ಬಿ.ಕ್ರಾಸ್, ಸಂಪಿಗೆ ರಸ್ತೆ, ಅಶೋಕ ನಗರ, ತುಮಕೂರು ಇಲ್ಲಿ ಅರ್ಜಿಯೊಂದಿಗೆ ನೋಂದಾಯಿಸಿಕೊಳ್ಳುವುದು.

19 ರಂದು ಸಂಗೀತ ಕಚೇರಿ
ತುಮಕೂರು: ತುಮಕೂರು ಗಾಯನ ಸಭಾ ವತಿಯಿಂದ ಇದೇ ತಿಂಗಳ 19 ರಂದು ಸಂಜೆ 4-15 ಕ್ಕೆ ಸಂಗೀತ ಕಚೇರಿ ಏರ್ಪಡಿಸಲಾಗಿದೆ. ಬೆಂಗಳೂರಿನ ಪಿ. ರಮ ಹಾಗೂ ವೃಂದದವರಿಂದ ತುಮಕೂರಿನ ಟೌನ್‌ಹಾಲ್ ಪಕ್ಕದಲ್ಲಿರುವ ಸಿದ್ದಗಂಗಾ ಬಾಲಕರ ಕಾಲೇಜಿನಲ್ಲಿ ಈ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ಗಾಯನಸಭಾ ಅಧ್ಯಕ್ಷ ಟಿ.ಎ. ಲಕ್ಷ್ಮೀನಾರಾಯಣಶೆಟ್ಟಿ, ಕಾರ್ಯದರ್ಶಿ ಟಿ.ಎಚ್. ತ್ಯಾಗರಾಜ್ ತಿಳಿಸಿದ್ದಾರೆ.

ಪಠ್ಯ ಪುಸ್ತಕಗಳ ವಿತರಣೆ
ತುಮಕೂರು: 2013-14ನೇ ಸಾಲಿಗೆ ಖಾಸಗಿ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 1ರಿಂದ 10 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರಾಟ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲು ತುಮಕೂರು ಶೈಕ್ಷಣಿಕ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಪಠ್ಯಪುಸ್ತಕಗಳು ಈಗಾಗಲೇ ಸರಬರಾಜಾಗಿದ್ದು, ಪ್ರಸ್ತುತ ಸರಬರಾಜಾಗಿರುವ ಪಠ್ಯಪುಸ್ತಕಗಳನ್ನು ಖಾಸಗಿ ಅನುದಾನ ರಹಿತ ಶಾಲೆಗಳಿಗೆ ವಿತರಿಸಲಾಗುತ್ತಿದೆ.  ಆದ್ದರಿಂದ ಈಗಾಗಲೇ ಖಾಸಗೀ ಅನುದಾನ ರಹಿತ ಶಾಲೆಯವರು ಬೇಡಿಕೆ ಸಲ್ಲಿಸಿರುವಂತೆ ಪ್ರಸ್ತುತ ಸರಬರಾಜಾಗಿರುವ ಪಠ್ಯಪುಸ್ತಕಗಳ ಮೊತ್ತಕ್ಕೆ ಬ್ಯಾಂಕ್ ಹುಂಡಿಯನ್ನು ಪಡೆದು ಮಾರಾಟ ಮಳಿಗೆಯಲ್ಲಿ ಪಠ್ಯಪುಸ್ತಕಗಳನ್ನು ಖರೀದಿಸುವಂತೆ ಅವರು ತಿಳಿಸಿದ್ದಾರೆ.

ದಾಸಾಲುಕುಂಟೆಯಲ್ಲಿ ಜಾತ್ರಾ ಮಹೋತ್ಸವ
ತುಮಕೂರು: ಕೊರಟಗೆರೆ ತಾಲೂಕು ಸಿ.ಎನ್. ದುರ್ಗ ಹೋಬಳಿ ದಾಸಾಲುಕುಂಟೆಯಲ್ಲಿ ಚೌಡೇಶ್ವರಿ ಹಾಗೂ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ 5 ನೇ ವರ್ಷದ ಮಡಿಲಕ್ಕಿ ಕಾರ್ಯಕ್ರಮವನ್ನು ಇದೇ ತಿಂಗಳ 17 ಹಾಗೂ 18 ರಂದು ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಚಿಟ್ಟಿಮೇಳ, ವೀರಗಾಸೆ ಕುಣಿತ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಟಾಗಿವೆ. 17 ರಂದು ಮಧ್ಯಾಹ್ನ 12 ಗಂಟೆಗೆ ಆರತಿ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ, 18 ರಂದು ಬೆಳಗ್ಗೆ 10-30 ಕ್ಕೆ  ಗ್ರಾಮದ ಹೆಣ್ಣು ಮಕ್ಕಳಿಗೆ ಮಡಿಲಕ್ಕಿ ಕಾರ್ಯಕ್ರಮ ಏರ್ಪಾಟಾಗಿದೆ. ಆಶೀರ್ವಚನವನ್ನು ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ದೊಡ್ಡಬಳ್ಳಾಪುರದ ಜ್ಞಾನಾನಂದಗಿರಿ ಸ್ವಾಮಿಗಳು, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸೂರೇನಹಳ್ಳಿಯ ಭಜನೆ, ತತ್ವಪದ ಹಾಗೂ ಭಕ್ತಿಗೀತೆ ಕಲಾವಿದರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಲೇಖಕಿ ಬಿ.ಸಿ. ಶೈಲಾ ನಾಗರಾಜ್ ಪಾಲ್ಗೊಳ್ಳಲ್ಲಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement