ಕಾಂಗ್ರೆಸ್ ಗೆದ್ದ ನಂತರ ದಲಿತರಿಗೆ ಟೋಪಿ
ಹಾಸನ: ಈ ಬಾರಿ ದಲಿತ ಜನಾಂಗದ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ.ಜಿ. ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ನಂಬಿಸಿ ದಲಿತರ ಮತಗಳನ್ನು ದೋಚಿದರು. ಗೆದ್ದ ನಂತರ ದಲಿತರ ತಲೆಗೆ ಕಾಂಗ್ರೆಸ್ ಇಂದಿರಾಗಾಂಧಿ, ನೆಹರು ಟೋಪಿ ಹಾಕಿ ಮೋಸಗೊಳಿಸಿದೆ ಎಂದು ಕರ್ನಾಟಕ ದಸಂಸ ರಾಜ್ಯ ಸಂಘಟನಾ ಸಂಚಾಲಕ ಕೆ.ಈರಪ್ಪ ಆರೋಪಿಸಿದ್ದಾರೆ. ಬೆರಳೆಣಿಕೆಯಷ್ಟಿರುವ ಜನಾಂಗದವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಗುತ್ತದೆ. ಶೇ. 23 ಇರುವ ಬಹುಸಂಖ್ಯಾತ ದಲಿತ ಜನಾಂಗಕ್ಕೆ ಅವಕಾಶ ನೀಡದೆ ಮೋಸಗೊಳಿಸಲಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ.ಜಾತಿ ಮತ್ತು ಪರಿಶಿಷ್ಟ ವರ್ಗದ ಜನರನ್ನು ಕಾಂಗ್ರೆಸ್ ವಂಚನೆ ಮಾಡುತ್ತಲೇ ಬಂದಿದೆ ಎಂದು ದೂರಿದರು.