ಜವನಹಳ್ಳಿಯಲ್ಲಿ ಯಶಸ್ವಿ ಹತ್ತು ದಿನ ಗ್ರಾಮೀಣ ಸಮಾಜಕಾರ್ಯ ಶಿಬಿರ
ಕನ್ನಡಪ್ರಭ ವಾರ್ತೆ, ತುಮಕೂರು, ಮೇ 14
ಶಿರಾ ತಾಲೂಕು, ಕಳ್ಳಂಬೆಳ್ಳ ಹೋಬಳಿಯ ಜವನಹಳ್ಳಿ ಗ್ರಾಮದಲ್ಲಿ ಹೇಮಾದ್ರಿ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದಿಂದ ಹತ್ತು ದಿನಗಳ ಗ್ರಾಮೀಣ ಸಮಾಜಕಾರ್ಯ ಶಿಬಿರ ಆಯೋಜಿಸಲಾಗಿತ್ತು.
ಎಚ್‌ಐಎಂಎಸ್ ಕಾಲೇಜಿನ ಸಹ ಉಪನ್ಯಾಸಕ ಕೆ.ಸಿ. ಲಕ್ಷ್ಮೀಕಾಂತ ಮಾತನಾಡಿ ಪಿ.ಅರ್.ಎ ಎಂಬುದು ಗ್ರಾಮೀಣ ಸಮುದಾಯಗಳಲ್ಲಿ ಅಬಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಮತ್ತು ಗ್ರಾಮದ ಮಾಹಿತಿ ಸಂಗ್ರಹಿಸುವಾಗ ಮಹತ್ವವಾದ ಪಾತ್ರ ನಿರ್ವಹಿಸುತ್ತದೆ ಎಂದರು.
ಕಡಿಮೆ ವೆಚ್ಚ ಹಾಗೂ ಅಲ್ಪಾವಧಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬೇಕಾದ ಮಾಹಿತಿಗಳನ್ನು ಸಂಗ್ರಹಿಸುವುದು ಹೇಗೆ ಎಂದು ತಿಳಿಸಿದರು.
ಈ ಚಟುವಟಿಕೆಯನ್ನು ಸಾಮಾಜಿಕ ನಕ್ಷೆ, ಸಂಪನ್ಮೂಲ ನಕ್ಷೆ, ಸಂಪತ್ತು ಶ್ರೇಣೀಕರಣ, ಚಪಾತಿ ನಕ್ಷೆ, ಋತುಮಾನ ವಿಶ್ಲೇಷಣೆ ಮತ್ತು ಘಟಾನುಘಟನೆಗಳ ಮಾಹಿತಿಗಳನ್ನು ಸಮುದಾಯದವರ ನೆರವಿನೊಂದಿಗೆ ಶಿಬಿರಾರ್ಥಿಗಳು ಸಂಗ್ರಹಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಜಗನ್ನಾಥ್‌ರವರು ಮತ್ತು ಜವನಹಳ್ಳಿ ಗ್ರಾಮಪಂಚಾಯ್ತಿ ಸದಸ್ಯ ದೇವರಾಜುರವರು, ಹಾಗೂ ಶಿಬಿರಾಧಿಕಾರಿಗಳಾದ ನಿಸರ್ಗಪ್ರಿಯ, ಹೆಚ್.ಐ.ಎಮ್.ಎಸ್. ಕಾಲೇಜಿನ ಪ್ರಾಂಶುಪಾಲ ಬಿ.ಕೆ. ನಟರಾಜರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.