ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಜೃಂಭಣೆಯ ಪಟ್ಟಾಭಿರಾಮಸ್ವಾಮಿ ಬ್ರಹ್ಮ ರಥೋತ್ಸವ

Vishwanath S
Updated On : 15 May 2013, 12:16 pm

ರಾಮನಾಥಪುರ: ಇಲ್ಲಿನ ಶ್ರೀ ಪಟ್ಟಾಭಿರಾಮಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ವೈಭವದಿಂದ ನಡೆವೇರಿತು. ಅಕ್ಷಯ ತೃತೀಯದಂದು ಬೆಳಗ್ಗೆ ಪೂಜಾ ಕೈಂಕರ್ಯ ನಂತರ ಬ್ರಹ್ಮ ರಥೋತ್ಸವದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕೂರಿಸಿ ದಿವ್ಯ ಜಯಘೋಷದೊಂದಿಗೆ ವಿದ್ವಾನ್ ಎಸ್.ವಿ. ಲಕ್ಷ್ಮೀನಾರಾಯಣ ಭಟ್ಟರು ದೇವರಿಗೆ ಪೂಜೆ ಸಲ್ಲಿಸಿ ರಥೋತ್ಸಕ್ಕೆ ಚಾಲನೆ ನೀಡಿದರು. ನಂತರ ಸಹಸ್ರಾರು ಭಕ್ತ ಸಮೂಹ ತೇರನ್ನು ಎಳೆದು ಧನ್ಯತಾಭಾವರಾದರು. ರಾಜ್ಯದ ಬಹು ಭಾಗಗಳಿಂದ ಭಕ್ತರು ಅಗಮಿಸಿ ಕಾವೇರಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿದರು.  ತಾರಾಮಂಜು, ನಿವೃತ್ತ ಡಿಐಜಿ ಕಸ್ತೂರಿ ರಂಗನ್, ಅರ್. ರಾಮಪ್ರಿಯ, ಆರ್.ಆರ್. ಶ್ರೀನಿವಾಸ್, ಆರ್.ಎಸ್.ತಿರುಮಲಚಾರ್,  ತಿರುಮಲಚಾರ್, ಎಸ್.ಶ್ರೀನಿವಾಸ್,  ನರಸಿಂಹಮೂರ್ತಿ, ಸಿ.ಕೃಷ್ಣ ಅಗಮಿಕರು, ಪ್ರಧಾನ ಅರ್ಚಕರು ಪಂಡಿತರು, ಭಕ್ತರು ಇದ್ದರು. ಮೇ 15ರಂದು ಬುಧವಾರ ಪಂಚಮಿ, ದಿವ್ಯಶಯನೋತ್ಸವ, ಅಶ್ವವಾಹನೋತ್ಸವ, ಸೀತಾಪ್ರಣಯ ಕಲಹ ಸಂಧಾನ ಸೇವೆ, ಅವಭೃತ ಜಲಕ್ರೀಡೋತ್ಸವ, ಧ್ವಜಾವರೋಹಣ, ಮೌನ ಬಲಿ, 16ರಂದು ಗುರುವಾರ ಷಷ್ಠಿ ಹರಕೆ ಗರುಡೋತ್ಸವ, ಹನುಮಂತೋತ್ಸವ, 17ರಂದು ಶುಕ್ರವಾರ ಸಪ್ತಮಿ ಹರಕೆ ಗರುಡೋತ್ಸವ ದವನ ಮಂಟಪೋತ್ಸವ ನಡೆಯಲಿದೆ.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement