ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಿದ್ಧಗಂಗಾ ಮಹಿಳಾ ಕಾಲೇಜು 'ಜೀವಗಂಗೆ' ಲೋಕಾರ್ಪಣೆ

Vishwanath S
Updated On : 15 May 2013, 12:14 pm

ತುಮಕೂರು: ಇಲ್ಲಿನ ಸಿದ್ಧಗಂಗಾ ಮಹಿಳಾ ಕಾಲೇಜು “fÞÈÚVÚMVæ’ ಎಂಬ ಕಾಲೇಜು ವಾರ್ಷಿಕ ಸಂಚಿಕೆಯನ್ನು ಹೊರತಂದಿದೆ. ಸಿದ್ಧಗಂಗಾ ವಿದ್ಯಾಸಂಸ್ಥೆ ಅಧ್ಯಕ್ಷರಾದ ಡಾ. ಶಿವಕುಮಾರ ಸ್ವಾಮೀಜಿ ಅವರು “¬ÞÁÚß’ ವಿಷಯಾಧಾರಿತ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ನೀರು ವಿಷಯ ಇಂದು ಸಾರ್ವತ್ರಿಕ ಸಮಸ್ಯೆಯಾಗಿದ್ದು, ಯುವಜನತೆಯಲ್ಲಿ ನೀರಿನ ಬಗ್ಗೆ ಅರಿವು ಮೂಡಿಸುವ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ಸಂಚಿಕೆ ಪ್ರಕಟಗೊಂಡಿದೆ.
ನೀರಿನ ಮೂಲಗಳು ತಲಪರಿಗೆಗಳು, ಚಿಲುಮೆಗಳು, ತೆರೆದ ಬಾವಿಗಳು, ಕೆರೆ ನೀರು ನಿರ್ವಹಣೆ, ಶುದ್ಧ ಕುಡಿಯುವ ನೀರಿನ ಕೊರತೆ, ನೀರ ಅಗತ್ಯ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿನಿಯರು ತಮ್ಮ ಭಾವನೆಗಳನ್ನು ಬರಹ ರೂಪದಲ್ಲಿ ಪ್ರಕಟಿಸಿದ್ದಾರೆ. ನೀರಿನ ಮಾಲಿನ್ಯ, ನೀರಿನ ಪಾವಿತ್ರ್ಯತೆ ಪುರಾಣ ಕಥೆಗಳಲ್ಲಿ ನೀರಿನ ದೇವತೆಗಳ ಉಲ್ಲೇಖ, ನೀರಿನ ಸದ್ಬಳಕೆ ಬಗ್ಗೆ ಸಂಚಿಕೆ ಬೆಳಕು ಚೆಲ್ಲಿದೆ. ಸಾಮಾನ್ಯ ವಿಷಯಗಳಾಗಿ ಮೊಬೈಲ್ ಬಳಸುವಲ್ಲಿ ಎಚ್ಚರಿಕೆ, ದೇವಕಣ, ಐಸ್‌ಬರ್ಗ್, ಸ್ತ್ರೀ ಕುಲದ ಸ್ವಾತಂತ್ರ್ಯದ ಕಹಳೆ-ಮಲಾಲಾ, ಮುಂತಾದ ಲೇಖನಗಳಿವೆ. ಪ್ರತಿವರ್ಷ ವಿಷಯಾಧಾರಿತವಾದ ವರ್ಣಪುಟ ಸಹಿತವಾಗಿ ಪ್ರಕಟಗೊಳ್ಳುವ ಜೀವಗಂಗೆ ಈ ಬಾರಿ ನೀರು  ವಿಷಯಧಾರಿತವಾಗಿ ಪ್ರಕಟಗೊಂಡು ತುಮಕೂರು ಜಿಲ್ಲೆಯ ಪ್ರಮುಖ ಕೆರೆಗಳು, ನೀರಿನ ಮೂಲಗಳು, ನೇತ್ರಾವತಿ ನದಿನೀರಿನ ತಿರುವು ಯೋಜನೆಗಳನ್ನು ಒಳಗೊಂಡಿರುವುದು ಸ್ತುತ್ಯಾರ್ಹವಾಗಿದೆ. ಸದಾ ನಿಂತಲ್ಲಿ ನಿಲ್ಲದೆ ಹರಿವ ಗಂಗೆಯಂತೆ ಜೀವಗಂಗೆ ಮೌಲಿಕ ಸಂಚಿಕೆಯಾಗಿದೆ ಎಂದು ಸಿದ್ಧಲಿಂಗ ಮಹಾಸ್ವಾಮಿಗಳು ಪ್ರಶಂಸಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement