ಇಂದಿನಿಂದ ಮಕ್ಕಳ ಬೇಸಿಗೆ ಶಿಬಿರ
ಹುಳಿಯಾರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಘಟಕದ ಮಾರ್ಗದರ್ಶನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹುಳಿಯಾರು ಸನ್ಮಾರ್ಗ ಥಿಯಾಸಫಿಕಲ್ ಸೇವಾ ವಿಭಾಗದ ಸಹಕಾರದೊಂದಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಕ್ಕಳ ಬೇಸಿಗೆ ಶಿಬಿರ 2013 ಇಂದಿನಿಂದ (ತಾ.16) ಗುರುವಾರ ಮೇ.21ರವರೆಗೆ ಎಂಪಿಎಸ್ ಶಾಲಾ ಮೈದಾನದಲ್ಲಿ ನಡೆಯಲಿದೆ.
ಶಿಬಿರದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಇಂದು ಬೆಳಿಗ್ಗೆ 10.30ಕ್ಕೆ ನೆರವೇರಿಸಲಿದ್ದು,ಧರ್ಮಸ್ಥಳ ಸಂಘದ ಯೋಜನಾಧಿಕಾರಿ ರೋಹಿತಾಕ್ಷ ಅಧ್ಯಕ್ಷತೆವಹಿಸಲಿದ್ದಾರೆ.ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ನಂದಕುಮಾರ್, ಹೆಚ್.ಪಿ.ಎಸ್ ಶಾಲಾ ಮುಖ್ಯ ಶಿಕ್ಷಕ ನಂದವಾಡಿಗಿ,ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರೀಶ್ ಅತಿಥಿಗಳಾಗಿ ಆಗಮಿಸುವರು. ಶಿಕ್ಷಕರಾದ ಜಯಣ್ಣ, ಲಕ್ಷ್ಮೀಬಾಯಿ, ಅಶ್ವಥ್, ಪೂರ್ಣಮ್ಮ,ಸ್ಟುಡಿಯೋ ಯತೀಶ್,ರಾಜು,ಬಾಲಪ್ರತಿಭೆಗಳಾದ ಅನಿಲ್,ರಾಜೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಶಿಬಿರದಲ್ಲಿ ಆರರಿಂದ ಹದಿನಾಲ್ಕು ವರ್ಷದ ಮಕ್ಕಳಿಗೆ ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ ಅಶ್ವಿನಿ(9535660771),ಪುಷ್ಪಾವತಿ(8971743770), ಗಂಗಾಧರ್(9141282298) ಸಂಪರ್ಕಿಸು ವಂತೆ ಕೋರಲಾಗಿದೆ.