ಉಚಿತ ಸಾಮೂಹಿಕಾ ಲಸಿಕಾ ಕಾರ್ಯಕ್ರಮ
ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ತುಮಕೂರು ವತಿಯಿಂದ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಕುರಿ ಮತ್ತು ಮೇಕೆಗಳಿಗೆ ಪಿ.ಪಿ.ಆರ್. ರೋಗದ ವಿರುದ್ದ 2ನೇ ಸುತ್ತಿನ ಉಚಿತ ಸಾಮೂಹಿಕಾ ಲಸಿಕಾ ಕಾರ್ಯಕ್ರಮವನ್ನು ಮೇ 15 ರಿಂದ ಜೂನ್ 15 ರವರೆಗೆ ಕಾಲ ಹಮ್ಮಿಕೊಳ್ಳಲಾಗಿದೆ. ಈ ಕಾಯಿಲೆಯಿಂದ ತಮ್ಮ ಕುರಿ ಮತ್ತು ಮೇಕೆಗಳನ್ನು ಪಾರು ಮಾಡಲು ಎಲ್ಲಾ ಕುರಿ ಮತ್ತು ಮೇಕೆಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿಕೊಳ್ಳಲಾಗಿದೆ. ಪ್ರತಿ ಗ್ರಾಮದ ಸಾಮೂಹಿಕಾ ಲಸಿಕಾ ವೇಳಾಪಟ್ಟಿಯನ್ನು ತಿಳಿಯಲು ರೈತಭಾಂದವರು ತಮ್ಮ ಹತ್ತಿರವಿರುವ ಪಶುವೈದ್ಯ ಸಂಸ್ಥೆಗಳನ್ನು ಸಂಪರ್ಕಿಸಲು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.