ತಾಲೂಕಿನ ಅಭಿವೃದ್ಧಿಗೆ ಷಡಕ್ಷರಿ ಮುಂದಾಗಲಿ
ತಿಪಟೂರು: ಎಲ್ಲಾ ಜಾತಿ, ಧರ್ಮ, ವರ್ಗದ ಜನರ ಸಹಕಾರ, ಈ ಹಿಂದೆ ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಕಾಂಗ್ರೆಸ್ ಪರ ಅಲೆಯಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಗೆಲುವಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಮುಖಂಡ, ಟಿಎಪಿಸಿಎಂಎಸ್ ನಿರ್ದೇಶಕ ಮತ್ತಿಘಟ್ಟ ಎಂ.ಪಿ. ಸಿದ್ದಬಸವಯ್ಯ ತಿಳಿಸಿದ್ದಾರೆ.
ತಾಲೂಕಿನ ಸಮಗ್ರ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವುದು, ರೈತರ ಜೀವನಾಡಿ ತೆಂಗಿನ ಬೆಳೆಗೆ ಪ್ರೋತ್ಸಾಹ, ನೀರಾವರಿ ಸೌಲಭ್ಯ, ನಿವೇಶನ ರಹಿತ ಬಡವರಿಗೆ ನಿವೇಶನ ಸೇರಿದಂತೆ ತಾಲೂಕಿನಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೂತನ ಶಾಸಕರಾದ ಕೆ.ಷಡಕ್ಷರಿಯವರು ಮುಂದಾಗಬೇಕೆಂದಿದ್ದಾರೆ.
ಕೆ.ಷಡಕ್ಷರಿಯವರು ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಈಗಾಗಲೆ ರಾಜ್ಯಮಟ್ಟದ ಸಹಕಾರಿ ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ್ಲ ಸಚಿವ ಸ್ಥಾನದ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆಂದು ಸಿದ್ದಬಸವಯ್ಯ ತಿಳಿಸಿದ್ದು, ಕಾಂಗ್ರೆಸ್ ಗೆಲವಿಗೆ ಮತ ನೀಡಿದ ಮತದಾರರಿಗೂ ಹಾಗೂ ಎಲ್ಲಾ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸಿದರು.