ಸಂಶೋಧನಾರ್ಥಿ ಹುದ್ದೆಗೆ ಅರ್ಜಿ ಆಹ್ವಾನ
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಬಯೋಟೆಕ್ನಾಲಜಿ ವಿಭಾಗಕ್ಕೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ದಿಂದ ಮಂಜೂರಾಗಿರುವ ಪ್ರಧಾನ ಸಂಶೋಧನ ಯೋಜನೆಯೊಂದರಲ್ಲಿ ಸಂಶೋಧನಾರ್ಥಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಫೈಟೋಕೆಮಿಕಲ್ ಇನ್ವೆಸ್ಟಿಗೇಶನ್ ಅಂಡ್ ಆಚಿಟಿವೈರಲ್ ಪ್ರಾಪರ್ಟೀಸ್ ಆಫ್ ಸಮ್ ಪೊಟೆನ್ಶಿಯಲ್ ಮೆಡಿಸಿನಲ್ ಪ್ಲಾಂಟ್ಸ್ ಬೈ ಪ್ರೊಟೋಮಿಕ್ ಅಪ್ರೋಚಸ್ ಎಂಬ ಯುಜಿಸಿ-ಪ್ರಾಯೋಜಿತ ಈ ಸಂಶೋಧನ ಯೋಜನೆಗೆ ಒಬ್ಬ ಸಂಶೋಧನ ಅಭ್ಯರ್ಥಿಯ ಹುದ್ದೆ ಖಾಲಿಯಿದ್ದು ಮೊದಲ ಎರಡು ವರ್ಷ ಪ್ರತೀ ತಿಂಗಳು 14 ಸಾವಿರ ಹಾಗೂ ಮೂರನೆಯ ವರ್ಷ ಪ್ರತೀ ತಿಂಗಳು 16 ಸಾವಿರ ಸಂಭಾವನೆಯಿರುತ್ತದೆ. ಅಭ್ಯರ್ಥಿಯು ಬಯೋಟೆಕ್ನಾಲಜಿ-ಬಯೋಕೆವುಸ್ಟ್ರಿಣ-ಮೈಕ್ರೋಬಯಾಲಜಿ ವಿಷಯದಲ್ಲಿ ಎಂ.ಎಸ್.ಸಿ. ಪದವಿ ಪಡೆದಿದ್ದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರಾಗಿರಬೇಕು. ಯೋಜನೆಯ ಅವಧಿ ಮೂರು ವರ್ಷವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಡಾ. ರಾಜಾ ನಾಯ್ಕ ಎಚ್., ಪ್ರಧಾನ ಸಂಶೋಧಕ, ಯುಜಿಸಿ-ಎಂಆರ್ಪಿ, ಬಯೋಟೆಕ್ನಾಲಜಿ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು ಈ ವಿಳಾಸಕ್ಕೆ ತಮ್ಮ ಬಯೋಡೇಟಾ ಸಮೇತ ಮೇ 25 ರ ಒಳಗಾಗಿ ತಲುಪುವಂತೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಇಂದಿನಿಂದ ಪ್ಲೇಗಿನಮ್ಮ ಜಾತ್ರಾ ಮಹೋತ್ಸವ
ತಿಪಟೂರು: ನಗರದ ಗೊರಗೊಂಡನಹಳ್ಳಿ ಗ್ರಾಮದ ಪ್ಲೇಗಿನಮ್ಮನವರ 13ನೇ ವರ್ಷದ ಜಾತ್ರಾ ಮಹೋತ್ಸವವು ಮೇ 16ರಿಂದ ಮೇ. 18ರವರೆಗೆ ನಡೆಯಲಿದೆ. ಇಂದು ಧ್ವಜಾರೋಹಣ, ಶ್ರೀ ಅಮ್ಮನವರಿಗೆ ಮದುವಣಿಗೆ ಶಾಸ್ತ್ರ. ಮೇ 17 ಗಂಗಾಸ್ನಾನ ಮೇ 18ರಂದು ಬನ್ನಿ ಮರ ಹತ್ತಿಸುವ ಕಾರ್ಯ ಮತ್ತು ಮುಳ್ಳು ಗದ್ದಿಗೆ, ಉಯ್ಯಾಲೋತ್ಸವ ಹಾಗೂ ಪಲ್ಲಕ್ಕಿ ವಾನದಲ್ಲಿ ಉತ್ಸವ ನಡೆಯಲಿದೆ.
ಲೇಖನ, ಕವನ ಆಹ್ವಾನ
ಕುಣಿಗಲ್: ಜೂನ್ ಮಾಹೆಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈಚಾರಿಕ ಲೇಖನಗಳು ಮತ್ತು ಕವನ ಸಂಕಲನ ಎಂಬ ಎರಡು ಪುಸ್ತಕಗಳು ಸೇರಿದಂತೆ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎರಡು ಪುಸ್ತಕಗಳಿಗೆ ಆಸಕ್ತ ಬರಹಗಾರರು ಮತ್ತು ಕವಿಗಳು ತಮ್ಮ ಭಾವಚಿತ್ರಗಳೊಂದಿಗೆ ಸ್ವರಚಿತ ಲೇಖನ ಹಾಗೂ ಕವನಗಳನ್ನು ದಿನೇಶ್ಕುಮಾರ್, ಅಧ್ಯಕ್ಷರು, ಕಸಾಪ ಕುಣಿಗಲ್ ಹಾಗೂ ರಾಜೇಶ್ಗುಬ್ಬಿ, ಅಧ್ಯಕ್ಷಕರು ಕಸಾಪ, ಗುಬ್ಬಿ ಇವರಿಗೆ ಕಳಿಸಿಕೊಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.